Monday, September 21, 2026

BDA Apartments

ಆಟೋ ಚಲಾಯಿಸುತ್ತಿರುವಾಗಲೇ ಹೃದಯಘಾತ: ಚಾಲಕ ಸಾವು BDA JK_Adv BDA Adv
Home Crime ಆಟೋ ಚಲಾಯಿಸುತ್ತಿರುವಾಗಲೇ ಹೃದಯಘಾತ: ಚಾಲಕ ಸಾವು.

ಆಟೋ ಚಲಾಯಿಸುತ್ತಿರುವಾಗಲೇ ಹೃದಯಘಾತ: ಚಾಲಕ ಸಾವು.

ಬೆಂಗಳೂರು,ಆಗಸ್ಟ್,22,2023(www.justkannada.in):  ಆಟೋ ಚಲಾಯಿಸುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಚಾಲಕ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸಂಪಂಗಿ ರಾಮನಗರದಲ್ಲಿ ಈ ಘಟನೆ ನಡೆದಿದ್ದು, ತಿಮ್ಮೇಶ್ (53) ಮೃತ ಆಟೋಚಾಲಕ.  ಸಂಪಂಗಿ ರಾಮನಗರದಲ್ಲಿ ಟೀ ಕುಡಿಯಲು ಆಟೋ‌ ನಿಲ್ಲಿಸಿ ತೆರಳುತ್ತಿದ್ದ ತಿಮ್ಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆಟೋದಿಂದ ಇಳಿಯುವಾಗಲೇ ತಿಮ್ಮೇಶ್ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಎದೆಯನ್ನ ಸವರಿಸಿಕೊಳ್ಳುತ್ತ ಆಟೋದಿಂದ ತಿಮ್ಮೇಶ್ ಇಳಿದು ಹೋಗುವ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಿಮ್ಮೇಶ್ ಮಂಡ್ಯ ಮೂಲದವರಾಗಿದ್ದು ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದರು. ಇನ್ನು ಘಟನಾಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Key words: Heart Attack – Driving- Auto- Driver -Dies.