Tuesday, September 22, 2026

BDA Apartments

Home Front Page ಕಮಿಷನ್, ವರ್ಗಾವಣೆ, ನೇಮಕಾತಿಗಳ ದಂಧೆಯ ಜನಕ ಹೆಚ್.ಡಿ ಕುಮಾರಸ್ವಾಮಿ-ಬಿವೈ ವಿಜಯೇಂದ್ರ ತಿರುಗೇಟು…

ಕಮಿಷನ್, ವರ್ಗಾವಣೆ, ನೇಮಕಾತಿಗಳ ದಂಧೆಯ ಜನಕ ಹೆಚ್.ಡಿ ಕುಮಾರಸ್ವಾಮಿ-ಬಿವೈ ವಿಜಯೇಂದ್ರ ತಿರುಗೇಟು…

ಬೆಂಗಳೂರು,ಆ,19,2019(www.justkannada.in): ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ.  ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರರನ್ನೇ ಇದರ ಹಿಂದೆ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದ  ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಗೆ ಇದೀಗ  ಸಿಎಂ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಟ್ವೀಟ್ಟರ್ ನಲ್ಲಿ ಟ್ವಿಟ್ ಮಾಡಿ ಟಾಂಗ್ ಕೊಟ್ಟಿರುವ ಬಿವೈ ವಿಜಯೇಂದ್ರ,  “ಕಮೀಷನ್ ದಂಧೆ ,ವರ್ಗಾವಣೆ ದಂಧೆ,ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ, “ಕೋತಿ ತಾನು ತಿಂದು ಮೇಕೆ ಬಾಯಿಗೆವರೆಸಿ ದಂತಿದೆ “ನಿಮ್ಮ ಮಾತುಗಳು. ಸಿಬಿಐ ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ ವಿಷಯಾಂತರಗೊಳಿಸಿ ಜನತೆಯ ಧಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ” ಎಂದು  ತಿರುಗೇಟು ನೀಡಿದ್ದಾರೆ.

ವರ್ಗಾವಣೆ, ಕಮಿಷನ್, ನೇಮಕಾತಿಗಳ ಜನಕ ಹೆಚ್.ಡಿ ಕುಮಾರಸ್ವಾಮಿ ಅವರೇ ಆಗಿದ್ದಾರೆ.  ಅವರು ಮಾತುಗಳು ಕೋತಿ ತಾನು ತಿಂದು ಮೇಕೆ ಮೂತಿಗೊರೆಸಿದಂತಿದೆ ಎಂದು ಕಿಡಿಕಾರಿದ್ದಾರೆ. ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ.  ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರರನ್ನೇ ಇದರ ಹಿಂದೆ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದರು.

Keyw words: HD Kumaraswamy- originator – Commission- Transfer –Appointments-BY Vijayendra -tong