Wednesday, August 12, 2026

BDA Apartments

Home Front Page ರಾಜ್ಯ ಸಚಿವ ಸಂಪುಟ ರಚನೆ ವಿಚಾರ: ಇಂದು ಪ್ರಧಾನಿ ಮೋದಿ ಜತೆ ಅಮಿತ್ ಶಾ ಚರ್ಚೆ..

ರಾಜ್ಯ ಸಚಿವ ಸಂಪುಟ ರಚನೆ ವಿಚಾರ: ಇಂದು ಪ್ರಧಾನಿ ಮೋದಿ ಜತೆ ಅಮಿತ್ ಶಾ ಚರ್ಚೆ..

ನವದೆಹಲಿ,ಆ,19,2019(www.justkannada.in): ರಾಜ್ಯ ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನಿ ಮೋದಿ ಬಳಿ ಇಂದು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಬೂತಾನ್ ಪ್ರವಾಸದಿಂದ ಪ್ರಧಾನಿ ಮೋದಿ ನಿನ್ನೆ ದೇಶಕ್ಕೆ ಆಗಮಿಸಿದ್ದಾರೆ. ಈ ನಡುವೆ ಸಚಿವ ಸಂಪುಟ ರಚನೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ  ಅವರು ಅಮಿತ್ ಶಾ ಜತೆ ಚರ್ಚೆ ನಡೆಸಿದ್ದಾರೆ.  ಈ ಮಧ್ಯೆ ಅಮಿತ್ ಶಾ ಸಚಿವ ಪಟ್ಟಿಯನ್ನ ಸಿಎಂ ಬಿಎಸ್ ಯಡಿಯೂರಪ್ಪಗೆ ರವಾನಿಸಬೇಕಿದೆ. ಹೀಗಾಗಿ ಇಂದು ಅಮಿತ್ ಶಾ ಪ್ರಧಾನಿ ಮೋದಿ ಬಳಿ ಚರ್ಚಿಸಿ ನಂತರ ಪಟ್ಟಿ ರವಾನಿಸುವ ಸಾಧ್ಯತೆ ಇದೆ.

ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಿತ್ ಶಾ ಅವರು ಕೇಂದ್ರ ಸಚಿವ ಜೆಪಿ ನಡ್ಡಾ ಮತ್ತು   ಸಂತೋಷ್ ಅವರ ಜತೆ ಚರ್ಚಿಸಿದ್ದಾರೆ. ಸಚಿವರ ಪಟ್ಟಿ ರವಾನೆಯಾದ ನಂತರ ನಾಳೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Key  words:  Cabinet Structure- Amit Shah- talks- with- PM Modi -today