ಇಂಗ್ಲೆಂಡ್ ವಿರುದ್ಧ ಹರ್ಲೀನ್ ಹಿಡಿದ ‘ಸೂಪರ್ ವುಮೆನ್’ ಕ್ಯಾಚ್ ! ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬೆಂಗಳೂರು, ಜುಲೈ 10, 2021 (www.justkannada.in): ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್ ಹಿಡಿದ ರೋಚಕ ಕ್ಯಾಚ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

19ನೇ ಓವರ್ ಬೌಲಿಂಗ್ ಮಾಡಿದ ಶಿಖಾ ಪಾಂಡೆ ತಮ್ಮ 5ನೇ ಎಸೆತವನ್ನು ಸ್ಲೋ ಆಗಿ ಎಸೆತದರು. ಕ್ರೀಸ್​ನಲ್ಲಿದ್ದ ಎಲೆನ್ ಜೋನ್ಸ್ ಸಿಕ್ಸ್​ಗೆಂದು ಬ್ಯಾಟ್ ಬೀಸಿದರು.

ಬೌಂಡರಿ ಲೈನ್ ಪಕ್ಕದಲ್ಲೇ ಇದ್ದ ಹರ್ಲೀನ್ ಅವರು ಹಾರಿ ಚೆಂಡನ್ನು ಹಿಡಿದರು. ಆದರೆ, ಸಂಪೂರ್ಣವಾಗಿ ಕ್ಯಾರಿ ಮಾಡಲು ಸಾಧ್ಯವಾಗಿಲ್ಲ.

ಬಳಿಕ ನಿಯಂತ್ರಣ ತಪ್ಪಿ ಸಿಕ್ಸ್​ ಗೇರೆ ದಾಟುವ ಹೊತ್ತಿಗೆ ಚೆಂಡನ್ನು ಕೈಯಿಂದ ಮೇಲೆ ಹಾರಿಸಿದರು. ಇದೇವೇಳೆ ಬೌಂಡರಿ ಲೈನ್​ನಿಂದಲೇ ಜಿಗಿದು ಸೂಪರ್ ಮ್ಯಾನ್​ನಂತೆ ಬಾಲ್ ಹಿಡಿದು ಜೋನ್ಸ್​ ಔಟ್ ಆಗಲು ಕಾರಣರಾದರು. ಈ ವಿಡಿಯೋ ನೋಡಿದ ಅಭಿಮಾನಿಗಳು, ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.