‘ಹರಿ ಕತೆಯಲ್ಲ ಗಿರಿ ಕತೆ’ ಶೆಟ್ಟರ ಕಾಮಿಡಿ ಮೋಡಿ: ಟೀಸರ್ ಮೆಚ್ಚಿದ ಫ್ಯಾನ್ಸ್

ಬೆಂಗಳೂರು, ಜೂನ್ 14, 2022 (www.justkannada.in): ರಿಷಬ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಹರಿ ಕತೆಯಲ್ಲ ಗಿರಿ ಕತೆ ಸಿನಿಮಾದ ಟ್ರೆಲರ್ ಬಿಡುಗಡೆಯಾಗಿದ್ದು, ಶೆಟ್ಟರ ಕಾಮಿಡಿ ಮೋಡಿ ಮಾಡಿದೆ.

ಹೌದು, ರಿಷಭ್ ಶೆಟ್ಟಿ ಅಭಿನಯದ ಸಿನಿಮಾದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಅಂದಹಾಗೆ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೊದಲ ವಿಡಿಯೋ ಸಾಂಗ್ ಜೂ. ಮೊನಾಲಿಸಾಗೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ಬಂದಿತ್ತು.

ಇದೀಗ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಶೆಟ್ಟರ ಕಾಮಿಡಿ ಪಂಚಿಂಗ್ ಗಮನ ಸೆಳೆದಿದೆ. ಈ ಮೂಲಕ ಚಿತ್ರ ಥಿಯೇಟರ್ ನಲ್ಲಿ ಮೋಡಿ ಮಾಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.