Saturday, September 26, 2026

BDA Apartments

Congress Demands CEC Gyanesh Kumar BDA JK_Adv BDA Adv
Home Front Page ಜ್ಞಾನೇಶ್‌ ಕುಮಾರ್‌ ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ರು – ಶಾಸಕ ಸುರೇಶ್‌ ಕುಮಾರ್‌ ಟಾಂಗ್‌

ಜ್ಞಾನೇಶ್‌ ಕುಮಾರ್‌ ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ರು – ಶಾಸಕ ಸುರೇಶ್‌ ಕುಮಾರ್‌ ಟಾಂಗ್‌

ಬೆಂಗಳೂರು,ಸೆಪ್ಟಂಬರ್‌,26,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, ಜ್ಞಾನೇಶ್‌ ಕುಮಾರ್‌ ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ದರು ಎಂದು ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುರೇಶ್‌ ಕುಮಾರ್‌, ಕಾಂಗ್ರೆಸ್ ಪಕ್ಷವು ತಮ್ಮ ನಿರಂತರ ಸೋಲುಗಳಿಗೆ ಇಂತಹ ವಿಷಯಗಳನ್ನು ಮುನ್ನಲೆಗೆ ತಂದು ಯಾರನ್ನಾದರೂ ಹೊಣೆ ಮಾಡಲು ನೋಡುತ್ತಿದೆ.

ಕಾಂಗ್ರೆಸ್‌ ಸೋಲಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕು. ಜ್ಞಾನೇಶ್‌ ಕುಮಾರ್‌  ಬರುವ ಮುಂಚೆಯೂ ಕಾಂಗ್ರೆಸ್‌ ಸೋಲುತ್ತಿದ್ದರು. ಈಗ  ಚುನಾವಣಾ ಆಯೋಗದ ವಿರುದ್ದ ಮಾತನಾಡುತ್ತಿದ್ದಾರೆ.  ಆ ಕಾಂಗ್ರೆಸ್‌  ಹೋರಾಟದಲ್ಲಿ ಸತ್ಯವಿಲ್ಲ.‌ 60 ವರ್ಷ ದೇಶಕ್ಕೆ ಸೇವೆ ಮಾಡಿದ ಕಾಂಗ್ರೆಸ್‌ ಗೆ ಇದು ಸೂಕ್ತವಲ್ಲ ಎಂದು ಸುರೇಶ್‌ ಕುಮಾರ್‌ ಕಿಡಿಕಾರಿದರು.Congress Demands CEC Gyanesh Kumar jk02

Congress, demand, resignation CEC Gyanesh Kumar, BJP, MLA, S. Suresh Kumar…

English Summary
Title

Congress Demands CEC Gyanesh Kumar Resignation; BJP MLA Suresh Kumar Hits Back

Short Description
The Congress Party has launched nationwide protests demanding the immediate resignation of Chief Election Commissioner Gyanesh Kumar, citing an internal rift within the Election Commission of India (ECI). Reports revealed that fellow commissioners flagged unilateral decisions regarding the Special Intensive Revision (SIR) of electoral rolls. Meanwhile, senior BJP MLA S. Suresh Kumar strongly defended the poll body, slamming the opposition's protests as a desperate bid for political relevance. While Congress alleges voter roll manipulation, the BJP maintains that internal deliberations are routine and the final ECI decisions were entirely unanimous.