ಮೈಸೂರು, ಸೆ.26, 2026: ಮೃತ ಗ್ರಾಹಕರ ಖಾತೆ ಹಾಗೂ ಬ್ಯಾಂಕ್‌ನ ಆಂತರಿಕ ಖಾತೆಯಿಂದ ಒಟ್ಟು ₹61.57 ಲಕ್ಷ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಎಸ್‌ಬಿಐನ ಮಾಜಿ ಚೀಫ್ ಮ್ಯಾನೇಜರ್‌ಗೆ ಮೈಸೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಮೈಸೂರಿನ ಚಾಮುಂಡಿಪುರಂ ಎಸ್‌ಬಿಐ ಶಾಖೆಯಲ್ಲಿ ಚೀಫ್ ಮ್ಯಾನೇಜರ್ ಆಗಿದ್ದ ಎ.ವಿ. ಕುಲಕರ್ಣಿ @ ಅನಿರುದ್ಧ ವಸಂತರಾವ್ ಕುಲಕರ್ಣಿ ಶಿಕ್ಷೆಗೆ ಗುರಿಯಾದವರು.

2009ರ ಮೇ 13ರಿಂದ 2011ರ ಡಿಸೆಂಬರ್ 23ರ ಅವಧಿಯಲ್ಲಿ, 2005ರ ಏಪ್ರಿಲ್ 7ರಂದು ಮೃತಪಟ್ಟಿದ್ದ ಗ್ರಾಹಕ ಕೃಷ್ಣ ಅಯ್ಯರ್ ಅವರ ಖಾತೆಯಿಂದ ₹40.53 ಲಕ್ಷ ಹಾಗೂ ಬ್ಯಾಂಕ್‌ನ ಆಂತರಿಕ ಖಾತೆಯಿಂದ ₹21.04 ಲಕ್ಷ ಸೇರಿದಂತೆ ಒಟ್ಟು ₹61.57 ಲಕ್ಷ ಹಣವನ್ನು ಆರೋಪಿಯು ತನ್ನ ಹಾಗೂ ತನ್ನ ಪುತ್ರನ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಡ್ರಾ ಮಾಡಿಕೊಂಡಿದ್ದರು ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.
ಬ್ಯಾಂಕ್‌ನ ಮೇಲಾಧಿಕಾರಿಗಳ ವಿಚಾರಣೆಯಲ್ಲಿ ಹಣದ ದುರುಪಯೋಗ ಬೆಳಕಿಗೆ ಬಂದಿದ್ದು, ಆರೋಪಿ ಅಕ್ರಮವಾಗಿ ಹಣ ಡ್ರಾ ಮಾಡಿಕೊಂಡಿರುವುದನ್ನು ಒಪ್ಪಿಕೊಂಡು ಸುಮಾರು ₹62 ಲಕ್ಷವನ್ನು ಬ್ಯಾಂಕ್‌ಗೆ ಮರುಪಾವತಿಸಿದ್ದರು.

ಈ ಸಂಬಂಧ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಉಪನಿರೀಕ್ಷಕ ಪ್ರಶಾಂತ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು C.C. No.360/2013ರಂತೆ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್.ವಿ. ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಸೆ.25, 2026ರಂದು ತೀರ್ಪು ಪ್ರಕಟಿಸಿದರು.

KEY WORDS:
SBI Chief Manager, fraud case, A.V. Kulkarni, Aniruddha Vasantrao Kulkarni, ₹61.57 lakh, SBI fraud, Mysuru SBI, Chamundipuram branch, Former SBI manager, sentenced Mysuru court,







