ಟೋಕಿಯೋ,ಸೆಪ್ಟಂಬರ್,26,(www.justkannada): ಜಪಾನ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡವು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.
ರೋಚಕವಾಗಿ ನಡೆದ ಕಬಡ್ಡಿ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಮಣಿಸಿದ ಭಾರತೀಯ ಮಹಿಳೆ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಪಂದ್ಯದ ಆರಂಭದಿಂದಲೂ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತೀಯ ಆಟಗಾರ್ತಿಯರು, ಎದುರಾಳಿ ತಂಡಕ್ಕೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡದೆ ತೀವ್ರ ಪೈಪೋಟಿ ನೀಡಿ ಗೆಲುವಿನ ನಗೆ ಬೀರಿದರು.
ಈ ಗೆಲುವಿನೊಂದಿಗೆ ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಸ್ವರ್ಣ ಸೇರ್ಪಡೆಯಾಗಿದ್ದು, ದೇಶದ ಪದಕಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಭಾರತವು ಇದುವರೆಗೆ ಒಟ್ಟು 3 ಚಿನ್ನದ ಪದಕಗಳು ಸೇರಿದಂತೆ ಒಟ್ಟು 27 ಪದಕಗಳನ್ನು ತನ್ನ ಮುಡಿಗೆೇರಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.







