ಜುಲೈ 8 ರಂದು ರಣವೀರ್ ವರ್ಸಸ್ ವೈಲ್ಡ್ ರಿಲೀಸ್

ಬೆಂಗಳೂರು, ಜೂನ್ 14, 2022 (www.justkannada.in): ರಣವೀರ್ ಸಿಂಗ್  ಮತ್ತು ಮ್ಯಾನ್ ವರ್ಸಸ್ ವೈಲ್ಡ್ ಹೋಸ್ಟ್ ಬೇರ್ ಗ್ರಿಲ್ಸ್ ನೇತೃತ್ವದಲ್ಲಿ ಜುಲೈ 8 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ರಣವೀರ್ ವರ್ಸಸ್ ವೈಲ್ಡ್ ಲಗ್ಗೆ ಇಡಲಿದೆ.

ಹೌದು. ರಣವೀರ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್‌ ಟ್ರೈಲರ್ ಮತ್ತು ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ.

ರಣವೀರ್ ವರ್ಸಸ್ ವೈಲ್ಡ್ ಟ್ರೈಲರ್‌ ಅದ್ಭುತವಾಗಿ ಮೂಡಿ ಬಂದಿದೆ. ರಣವೀರ್ ಕಾಡಿನಲ್ಲಿ ಬದುಕುವ ಪ್ರಯತ್ನದಲ್ಲಿ ಕರಡಿಗಳಿಂದ ಓಡಿ ಹೋಗುವುದನ್ನು ಟೀಸರ್ ನಲ್ಲಿ ನೋಡಬಹುದಾಗಿದೆ.

ಸಾಹಸಿ ಗ್ರಿಲ್ಸ್ ಅವರ ಅದ್ಭುತ ಸಾಹಸಮಯ ದೃಶ್ಯಗಳನ್ನು ಇಲ್ಲಿ ಸಹಜ ಸುಂದರವಾಗಿ ಕಟ್ಟಿಕೊಡಲಾಗಿದೆ. ಬೇರ್ ಗ್ರಿಲ್ಸ್ ಜಿಪ್‌ಲೈನ್‌ನಲ್ಲಿ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.