ಪವರ್ ಸ್ಟಾರ್’ಗೆ ಇಂದು ಜನ್ಮದಿನದ ಸಂಭ್ರಮ

ಬೆಂಗಳೂರು, ಮಾರ್ಚ್ 17, 2021 (www.justkannada.in):

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಕೊರೊನಾ ಆತಂಕದ ಕಾರಣ ಈ ವರ್ಷವೂ ಅಭಿಮಾನಿಗಳಿಗೆ ಮನೆಯ ಬಳಿ ಬರಬೇಡಿ ಎಂದು ಅಪ್ಪು ಮನವಿ ಮಾಡಿಕೊಂಡಿದ್ದರು.

ಹೀಗಾಗಿ ಈ ವರ್ಷ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬದವರ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳು ದೂರದ ಊರಿನಿಂದಲೇ ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ಕೋರುತ್ತಿದ್ದಾರೆ.

ಬರ್ತ್ ಡೇ ಸ್ಪೆಷಲ್ ಇಂದು ಬಹುನಿರೀಕ್ಷೆಯ ಜೇಮ್ಸ್ ಸಿನಿಮಾದ ಪೋಸ್ಟರ್ ರಿಲೀಸ್ ಆಗುತ್ತಿದೆ.