Thursday, August 20, 2026

BDA Apartments

Home Cinema ಬರ್ತ್ ಡೇ ಸ್ಪೆಷಲ್ ‘ತೋತಾಪುರಿ’ ಟೀಂನಿಂದ ನವರಸ ನಾಯಕ ಜಗ್ಗೇಶ್’ಗೆ ವಿಶೇಷ ಉಡುಗೊರೆ

ಬರ್ತ್ ಡೇ ಸ್ಪೆಷಲ್ ‘ತೋತಾಪುರಿ’ ಟೀಂನಿಂದ ನವರಸ ನಾಯಕ ಜಗ್ಗೇಶ್’ಗೆ ವಿಶೇಷ ಉಡುಗೊರೆ

ಬೆಂಗಳೂರು, ಮಾರ್ಚ್ 17, 2021 (www.justkannada.in):

ನವರಸ ನಾಯಕ ಜಗ್ಗೇಶ್ ಅವರಿಗೆ ತೋತಾಪುರಿ ಚಿತ್ರತಂಡ ಬರ್ತ್ ಡೇ ಗಿಫ್ಟ್ ನೀಡಿದೆ.

ಹೌದು. ಜಗ್ಗೇಶ್ ಬರ್ತ್ ಡೇ. ಅವರ ಜನ್ಮದಿನಕ್ಕೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇದರ ಜತೆಗೆ ತೋತಾಪುರಿ ಚಿತ್ರತಂಡವೂ ವಿಶೇಷ ಗಿಫ್ಟ್ ನೀಡಿದೆ.

ವಿಜಯಪ್ರಸಾದ್ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಇತ್ತೀಚೆಗಷ್ಟೇ ಜಗ್ಗೇಶ್ ಚಿತ್ರೀಕರಣ ಪೂರ್ತಿ ಮಾಡಿದ್ದರು.

ಅಪ್ಪನ ಕಾಲವಾದ ಬಳಿಕ 8 ವರ್ಷಗಳ ಬಳಿಕ ಮನೆಯಲ್ಲೇ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೇನೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಅಂದಹಾಗೆ ಪ್ರತಿ ವರ್ಷ ಜಗ್ಗೇಶ್ ಜನ್ಮದಿನದಂದು ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಮಂತ್ರಾಲಯಕ್ಕೆ ತೆರಳುತ್ತಿದ್ದರು.