Sunday, August 9, 2026

BDA Apartments

Home Front Page ಕೆಲವೇ ದಿನಗಳಲ್ಲಿ ಹೆಚ್.ವಿಶ್ವನಾಥ್ ಗೆ  ಒಳ್ಳೆಯ ಅವಕಾಶ ಸಿಗುತ್ತೆ- ಸಚಿವ ವಿ.ಸೋಮಣ್ಣ…

ಕೆಲವೇ ದಿನಗಳಲ್ಲಿ ಹೆಚ್.ವಿಶ್ವನಾಥ್ ಗೆ  ಒಳ್ಳೆಯ ಅವಕಾಶ ಸಿಗುತ್ತೆ- ಸಚಿವ ವಿ.ಸೋಮಣ್ಣ…

ಬೆಂಗಳೂರು,ಫೆ,3,2020(www.justkannada.in): ಮುಂದಿನ ದಿನಗಳಲ್ಲಿ ಹಳ್ಳಿಹಕ್ಕಿ ಸಕ್ರಿಯವಾಗಿ ಹಾರಾಡುತ್ತೆ. ಕೆಲವೇ ದಿನಗಳಲ್ಲಿ ವಿಶ್ವಗೂ ಒಳೆಯ ಅವಕಾಶ ಸಿಗುತ್ತೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಹೆಚ್.ವಿಶ್ವನಾಥ್ ಸಿಎಂ ಬಿಎಸ್ ವೈ ಭೇಟಿಯಾಗಿ ಚರ್ಚಿಸಿದರು. ಬಳಿಕ ಹೆಚ್.ವಿಶ್ವನಾಥ್ ಅವರ ಜತೆಯಲ್ಲೇ ಹೊರಬಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ವಿ.ಸೋಮಣ್ಣ ಹೆಚ್.ವಿಶ್ವನಾಥ್ ಹಿರಿಯ ರಾಜಕಾರಣಿ. ಅವರು ರಾಜಕೀಯದಲ್ಲಿ ಎಲ್ಲವನ್ನೂ ಕಂಡು ಅನುಭವಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ದೊಡ್ಡದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಗೆಯೇ ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಮುಂದಿನ ದಿನಗಳಲ್ಲಿ ಹಳ್ಳಿಹಕ್ಕಿ ಸಕ್ರಿಯವಾಗಿ ಹಾರಾಡುತ್ತೆ. ಕೆಲವೇ ದಿನಗಳಲ್ಲಿ ವಿಶ್ವಗೂ ಒಳೆಯ ಅವಕಾಶ ಸಿಗುತ್ತದೆ. ಹೆಚ್.ವಿಶ್ವನಾಥ್ ಕೆಲಸ ಮಾಡಿಕೊಂಡು ಆರಾಮವಾಗಿ ಇರ್ತಾರೆ ಎಂದು ಸೋಮಣ್ಣ ತಿಳಿಸಿದರು.

Key words: H. Vishwanath – good chance – few days-Minister -V. Somanna.