Sunday, September 20, 2026

BDA Apartments

ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ದುರ್ಬಳಕೆ ತಪ್ಪಿಸಲು ಸರ್ಕಾರ ತೀರ್ಮಾನ- ಸಚಿವ...
Home Front Page ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ:  ದುರ್ಬಳಕೆ ತಪ್ಪಿಸಲು ಸರ್ಕಾರ ತೀರ್ಮಾನ- ಸಚಿವ ಮಧು ಬಂಗಾರಪ್ಪ

ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ:  ದುರ್ಬಳಕೆ ತಪ್ಪಿಸಲು ಸರ್ಕಾರ ತೀರ್ಮಾನ- ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಆಗಸ್ಟ್,14,2024 (www.justkannada.in):  ಗ್ಯಾರಂಟಿ ಯೋಜನೆಗಳಿಗೆ ಕೆಲ ಸಚಿವರ ಅಸಮಾಧಾನ ವ್ಯಕ್ತಪಡಿಸಿದ  ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಧು ಬಂಗಾರಪ್ಪ, ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಆದೆ ದುರ್ಬಳಕೆ ತಪ್ಪಿಸಲು ಸರ್ಕಾರ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಗ್ಯಾರಂಟಿ ಕುರಿತು ಸಚಿವರ ಹೇಳಿಕೆ ಅವರ ವೈಯಕ್ತಿಕ. ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಗೊತ್ತಿಲ್ಲ. ಆದರೆ ಯೋಜನೆಗಳ ಪ್ರಯೋಜನವನ್ನ ಅನರ್ಹರೂ ಕೂಡ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆ ದುರ್ಬಳಕೆ ತಪ್ಪಿಸಬೇಕು. ಗ್ಯಾರಂಟಿ ನಿಲ್ಲಿಸಲ್ಲ. ಮುಂದುವರೆಯುತ್ತೆ. ಪರಿಷ್ಕರಣೆ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತೆ ಎಂದರು.

ಬಿಜೆಪಿ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು ಅದಕ್ಕೆ ಪಾಯಾತ್ರೆ ಮಾಡಿದರು. ಆದರೆ ಅದು ಪ್ರಯೋಜನಕ್ಕೆ ಬರಲಿಲ್ಲ. ಸುಮ್ಮನೇ ಪಾದಯಾತ್ರೆ ಮಾಡಿದ್ದಾರೆ ಎಂದು ಟೀಕಿಸಿದರು.

Key words: Guarantee scheme, not stopped, Minister, Madhu Bangarappa