Friday, July 31, 2026

BDA Apartments

Home Front Page ಎಚ್.ಡಿ.ಕೆ.ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು : ಸಂಸದ ಪ್ರತಾಪ್ ಸಿಂಹ

ಎಚ್.ಡಿ.ಕೆ.ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು : ಸಂಸದ ಪ್ರತಾಪ್ ಸಿಂಹ

ಮೈಸೂರು,ಡಿಸೆಂಬರ್,06,2020(www.justkannada.in) : ಕುಮಾರಸ್ವಾಮಿಯವರಿಗೆ ತಡವಾಗಿ ಬಗ್ಗೆ ಅರಿವಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

logo-justkannada-mysore

ಕಾಂಗ್ರೆಸ್ ಜೊತೆ ಸೇರಿ ಕೆಟ್ಟೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಕುಮಾರಸ್ವಾಮಿಯವರಿಗೆ ತಡವಾಗಿ ಬಗ್ಗೆ ಅರಿವಾಗಿದೆ. ಹೆಚ್ಡಿಕೆ ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು ಎಂದಿದ್ದಾರೆ.

ಅವರ 20ತಿಂಗಳ ಆಡಳಿತ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಗ್ರಾಮವಾಸ್ತವ್ಯ, ಜನರ ಜೊತೆ ಬೆರೆಯುವ ನಡೆ ಅವರಿಗೆ ಹೆಸರು ತಂದುಕೊಟ್ಟಿತ್ತು. ಎಲ್ಲರನ್ನೂ ಬ್ರದರ್ ಎನ್ನುವ ಇವರ ಮಾತು ಸಾಕಷ್ಟು ಟ್ರೆಂಡ್ ಆಗಿತ್ತು. ಚಿಕ್ಕವಯಸ್ಸಿನಲ್ಲೇ ಸಿಎಂ ಆಗಿದ್ದ ಕುಮಾರಸ್ವಾಮಿಯವರ ಕುರಿತು ನಾನು ಲೇಖನ ಬರೆದಿದ್ದೆ ಎಂದರು.

Government-with-HDK-BJP-house-done-Mother-MP-Pratap shinmha

ಆದರೆ, ಅವರ ಇಂದಿನ ಪರಿಸ್ಥಿತಿ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಉತ್ತಮ ಆಡಳಿತ ನಡೆಸಿದ್ದ ಬಗ್ಗೆ ಗೌರವ ಇದೆ ಎಂದು ತಿಳಿಸಿದರು.

key words : Government-with-HDK-BJP-house-done-Mother-MP-Pratap shinmha