Sunday, September 13, 2026

BDA Apartments

ಜಾತಿಗಣತಿ ವರದಿಯನ್ನ ಸರ್ಕಾರ ಸ್ವೀಕರಿಸಲಿದೆ- ಸಚಿವ ಶಿವರಾಜ್ ತಂಗಡಗಿ BDA JK_Adv BDA Adv
Home Front Page ಜಾತಿಗಣತಿ ವರದಿಯನ್ನ ಸರ್ಕಾರ ಸ್ವೀಕರಿಸಲಿದೆ- ಸಚಿವ ಶಿವರಾಜ್ ತಂಗಡಗಿ.

ಜಾತಿಗಣತಿ ವರದಿಯನ್ನ ಸರ್ಕಾರ ಸ್ವೀಕರಿಸಲಿದೆ- ಸಚಿವ ಶಿವರಾಜ್ ತಂಗಡಗಿ.

ಬೆಂಗಳೂರು,ಡಿಸೆಂಬರ್,11,2023(www.justkannada.in):  ಜಾತಿ ಜನ ಗಣತಿ ಕುರತ ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡಲಿದೆ  ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ  ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಸಲುವಾಗಿ ಕಾಂತರಾಜು ನೇತೃತ್ವದಲ್ಲಿ ಜಾತಿ ಗಣತಿ ವರದಿ ಸಿದ್ಧಪಡಿಸಲು ಆದೇಶಿಸಲಾಗಿತ್ತು. ಇದಕ್ಕಾಗಿ  168 ಕೋಟಿ ರೂ. ನೀಡಲಾಗಿದ್ದು ಇದೀಗ ಕಾಂತರಾಜು ಆಯೋಗದ ವರದಿ ಪೂರ್ಣಗೊಂಡಿದೆ, ವರದಿಯನ್ನ ಸರ್ಕಾರ ಸ್ವೀಕಾರ ಮಾಡಲಿದೆ ಎಂದು ಹೇಳಿದರು.ಜಾತಿಗಣತಿ ವರದಿಯನ್ನ ಸರ್ಕಾರ ಸ್ವೀಕರಿಸಲಿದೆ shivaraj

ವರದಿ ಸ್ವೀಕಾರಕ್ಕೆ ವಿರೋಧ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ವರದಿ ಸ್ವೀಕಾರಕ್ಕೆ ಮೊದಲೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸರ್ಕಾರ ಇನ್ನೂ ವರದಿ ಪಡೆದುಕೊಂಡಿಲ್ಲ. ಅದರಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

Key words:  government -will -accept – caste census report – Minister -Shivraj Thangadagi