Thursday, August 13, 2026

BDA Apartments

Home Front Page ಆ.6ರಿಂದ ಅಧಿವೇಶನ: ಅಷ್ಟರೊಳಗೆ ಸಂಪುಟ ವಿಸ್ತರಣೆ- ಸಚಿವ ರಾಮಲಿಂಗರೆಡ್ಡಿ

ಆ.6ರಿಂದ ಅಧಿವೇಶನ: ಅಷ್ಟರೊಳಗೆ ಸಂಪುಟ ವಿಸ್ತರಣೆ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಜುಲೈ,13,2026 (www.justkannada.in):  ಆಗಸ್ಟ್ 6 ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ಅಷ್ಟರೊಳಗೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ನಾಳೆ ಅಥವಾ ನಾಡಿದ್ದು ಸಿಎಂ ದೆಹಲಿಗೆ ಹೋಗಬಹುದು. ಆಗಸ್ಟ್ 6 ರಿಂದ ಅಧೀವೇಶನ ನಡೆಯುತ್ತದೆ.  ಅಷ್ಟರೊಳಗೆ ಸಂಫುಟ ವಿಸ್ತರಣೆ ಆಗುತ್ತದೆ. ಅಷಾಢ ಮಾಸಕ್ಕೂ ಸಂಪುಟ ವಿಸ್ತರಣೆಗೂ ಏನ್ ಸಂಬಂಧ?  ಬ್ರಾಹ್ಮಣ ಸಮುದಾಯದವರು ಆಷಾಢದಲ್ಲಿ ಮದುವೆ ಮಾಡುತ್ತಾರೆ ಎಂದರು.

ಕೆಆರ್ ಎಸ್ ಡ್ಯಾಂ ನಿಂದ ನಾಲೆಗಳಿಗೆ ನೀರುವ ಬಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ,  ಎರಡ್ಮೂರು ದಿನ ನೋಡೋಣ. ಈಗ ನಾನು ಏನು ಮಾತನಾಡುವುದಿಲ್ಲ ಎಂದರು.

Key words:  Cabinet expansion, Minister, Ramalingareddy