ಬೆಂಗಳೂರು,ಜುಲೈ,13,2026 (www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಆಕ್ಷೇಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್ ಮೂರ್ನಾಲ್ಕು ದಿನಗಳಲ್ಲಿ ಹೈಕಮಾಂಡ್ ದೆಹಲಿಗೆ ಕರೆಯುತ್ತಾರೆ ಆಗ ಹೋಗುತ್ತೇನೆ. ಅದಕ್ಕೂ ಮುನ್ನ ಸಹ ದೆಹಲಿಗೆ ಹೋಗುತ್ತೇನೆ ನನ್ನ ಕೆಲಸ ಇದೆ ಎಂದರು.
ಆಗಸ್ಟ್ 6 ರಂದು ನಾನು ಅಧೀವೇಶನ ಕರೆಯುತ್ತಿದ್ದೇನೆ. ಟೈಮ್ ಕೊಟ್ಟಾಗ ಒಂದು ದಿನ ಮುಂಚೆ ದೆಹಲಿಗೆ ಹೋಗಿ ಬರುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
Key words: Cabinet expansion, Delhi, four days, CM, DK Shivakumar







