ರಾಮನಗರ,ಜುಲೈ,13,2026 (www.justkannada.in): ರಾಮನಗರದ ಬಿಡದಿ ಟೌನ್ ಶಿಪ್ ವಿರುದ್ದ ಆಕ್ರೋಶ ತೀವ್ರಗೊಂಡಿದ್ದು ಸಿಡಿದೆದ್ದ ಮಹಿಳೆಯರು ಸರ್ವೇ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿರುವ ಘಟನೆ ನಡೆದಿದೆ.
ರಾಮನಗರದ ಮಂಡಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಭದ್ರತೆಯೊಂದಿಗೆ ಬಿಡದಿ ಟೌನ್ ಶಿಪ್ ಸರ್ವೆಕಾರ್ಯಕ್ಕೆ ಅಧಿಕಾರಿಗಳು ಎರಡು ಕಾರಿನಲ್ಲಿ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ಮಹಿಳೆಯರು ಅಧಿಕಾರಿಗಳಿಗೆ ಕಾರಿಗೆ ಪೊರಕೆಯಿಂದ ಹೊಡೆದಿದ್ದಾರೆ. ಅಲ್ಲದೆ ಇಟ್ಟಿಗೆ ಕಲ್ಲುಗಳಿಂದಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಎರಡು ಕಾರುಗಳನ್ನ ಜಖಂಗೊಳಿಸಿ ಅಧಿಕಾರಿಗಳಿಗೆ ಹೊಡೆದಿದ್ದು, ಮಹಿಳೆಯರ ಆಕ್ರೋಶಕ್ಕೆ ಕಾರುಗಳ ಗಾಜು ಪುಡಿ ಪುಡಿಯಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Key words: Bidadi Township, Women, officers, break, car, Outrage,






