75 ಕೆಎಎಸ್ ಅಧಿಕಾರಿಗಳಿಗೆ ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿಗೆ ಬಡ್ತಿ ನೀಡಿ ಸರ್ಕಾರ ಆದೇಶ.

ಬೆಂಗಳೂರು,ಜೂನ್,2023(www.justkannada.in):  ಈಗಷ್ಟೆ 15 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ 75 ಕೆಎಎಸ್ ಅಧಿಕಾರಿಗಳಿಗೆ ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ.

ಹಾಗೆಯೇ ಬಹುತೇಕ ಅಧಿಕಾರಿಗಳಿಗೆ ಈಗಿರುವ ಹುದ್ದೆಯಲ್ಲಿ ಮುಂದವರಿಸಿದೆ.  ಬಡ್ತಿ ನೀಡಿದ್ದರಿಂದ ವೇತನ ಸಹ ಹೆಚ್ಚಳವಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಮಂಜುನಾಥ, ಸಿ, ಕೆ.ಎ.ಎಸ್‌ (ಕಿರಿಯ ಶ್ರೇಣಿ) ಅಧಿಕಾರಿ, ಇವರಿಗೆ ಕರ್ನಾಟಕ ನಾಗರಿಕ ಸೇವಾ (ಆರ್.ಪಿ.ಪಿ.ಪಿ) ನಿಯಮಗಳು, 1978ರ ನಿಯಮ 2(1)(ಎ)ರನ್ವಯ ಇವರಿಗಿಂತ ಜೇಷ್ಠತೆಯಲ್ಲಿ ಕಿರಿಯ ಅಧಿಕಾರಿಯಾದ ಇಲ್ಯಾಸ್ ಅಹ್ಮದ್ ಇಸ್ಮಾದಿ ಇವರಿಗೆ ಕೆ.ಎ.ಎಸ್‌ (ಹಿರಿಯ ಶ್ರೇಣಿ) ವೃಂದಕ್ಕೆ, ಬಡ್ತಿ ನೀಡಿದ ದಿನಾಂಕ: 20.09 2019ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಕೆ.ಎ.ಎಸ್‌ (ಹಿರಿಯ ಶ್ರೇಣಿ) ವೃಂದಕ್ಕೆ ಸ್ಥಾನವನ್ನ ಬಡ್ತಿ ನೀಡಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಉಪ ವಿಭಾಗಾಧಿಕಾರಿ, ರಾಮನಗರ ಉಪ ವಿಭಾಗ, ರಾಮನಗರ ಜಿಲ್ಲೆ ಹುದ್ದೆಯನ್ನು ಕ.ಎ.ಎಸ್‌ (ಹಿರಿಯ ಶ್ರೇಣಿ) ವೃಂದಕ್ಕೆ ಉನ್ನತೀಕರಿಸಿ ಹಾಗೆ ಉನ್ನತೀಕರಿಸಿದ  ಹುದ್ದೆಯಲ್ಲಿಯೇ ಮುಂದುವರಿಸಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಕೆ.ಎ.ಎಸ್‌ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ರೂ. 74,400-1,09,600ರ ವೇತನ ಶ್ರೇಣಿಯ ಕೆ.ಎ.ಎಸ್‌ (ಹಿರಿಯ ಶ್ರೇಣಿ) ವೃಂದಕ್ಕೆ, ಸ್ನಾನವನ್ನು ಬಡ್ತಿ ನೀಡಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಮುಂದಿನ ಆದೇಶವರಗ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಲ್ಲಿ ಮುಂದುವರಿಸಿ / ಸ್ಥಳನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ.

ಬಡ್ತಿಪಡೆದ ಕೆಎಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ.

Key words: Government –orders- promotion – 75 KAS officers