ಗ್ರಾಪಂ ಚುನಾವಣೆ, ಅಭ್ಯರ್ಥಿಗಳ ಕ್ರಮ ಸಂಖ್ಯೆ ಅದಲು ಬದಲು, ಚುನಾವಣಾ ಸಿಬ್ಬಂದಿ ಎಡವಟ್ಟು…!

ಮೈಸೂರು,ಡಿಸೆಂಬರ್,24,2020(www.justkannada.in) : ಇಬ್ಬರು ಅಭ್ಯರ್ಥಿಗಳ ಕ್ರಮ ಸಂಖ್ಯೆ ಅದಲು ಬದಲು ಮಾಡಿ ಚುನಾವಣಾ ಸಿಬ್ಬಂದಿ ಎಡವಟ್ಟು ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.Teachers,solve,problems,Government,bound,Minister,R.Ashok

ಎರಡನೇ ಹಂತದ ಚುನಾವಣೆ ಡಿ.27ರಂದು ನಡೆಯಲಿದೆ. ನಂಜನಗೂಡು ತಾಲೂಕು ಎಸ್.ಹೊಸಕೋಟೆ ಗ್ರಾಮ ಪಂಚಾಯತಿಯ ಆಲತ್ತೂರು ಗ್ರಾಮದ ವಾರ್ಡ್ ನಂ.1 ರಲ್ಲಿ ಈ ಘಟನೆ ನಡೆದಿದ್ದು, ಇದೀಗ ಬಯಲಾಗಿದೆ.

ಆಲತ್ತೂರು ಗ್ರಾಮದ ವಾರ್ಡ್ ನಂ 1 ಕ್ಕೆ ಆರ್.ಪ್ರಕಾಶ್ ಹಾಗೂ ಪುಟ್ಟಸಿದ್ದಮ್ಮ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಚುನಾವಣಾ ಅಧಿಕಾರಿಗಳು ಕ್ರಮ ಸಂಖ್ಯೆ ಅದಲು, ಬದಲಾಗಿರುವುದರ ಬಗ್ಗೆ ಮಾಹಿತಿ ನೀಡಿ ಅಭ್ಯರ್ಥಿಗಳನ್ನು ಪೇಚಿಗೆ ಸಿಲುಕಿಸಿದ್ದಾರೆ.

ಆರ್.ಪ್ರಕಾಶ್ ಗೆ ಸಿಕ್ಕಿದ ಕ್ರಮ ಸಂಖ್ಯೆ 3 ಆಗಿದ್ದು, ಪುಟ್ಟಸಿದ್ದಮ್ಮ ಗೆ ಸಿಕ್ಕಿದ್ದ ಕ್ರಮ ಸಂಖ್ಯೆ 4. ಆದರೆ, ಚುನಾವಣಾಧಿಕಾರಿಗಳು ನೀಡಿದ್ದು, ಆರ್.ಪ್ರಕಾಶ್ ಗೆ ಕ್ರಮ ಸಂಖ್ಯೆ 4, ಪುಟ್ಟಸಿದ್ದಮ್ಮಗೆ 3. ಸಂಖ್ಯೆ ನೀಡಿ ಅದಲು, ಬದಲು ಮಾಡಿದ್ದಾರೆ.

Grapham-Election-Candidate-Serial-Number-   Otherwise-Made-instead-  Electoral-staff ...!

ಈಗಾಗಲೇ, ಈ ಕ್ರಮ ಸಂಖ್ಯೆಗಳ ಆಧಾರಿಸಿ ಅಭ್ಯರ್ಥಿಗಳು ಪಾಂಪ್ಲೇಟ್ ಮುದ್ರಿಸಿ ಪ್ರಚಾರ ಮಾಡಿದ್ದಾರೆ. ಡಿಸೆಂಬರ್ 27 ರಂದು ಚುನಾವನೆ ನಡೆಯಲಿದೆ. ಅಭ್ಯರ್ಥಿಗಳ ಸ್ಥಿತಿ ಅತಂತ್ರ ಎನ್ನುವಂತ್ತಾಗಿದೆ.

 key words : Grapham-Election-Candidate-Serial-Number-   Otherwise-Made-instead-  Electoral-staff …!