ಹೊಸ ವೈರಸ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಯು.ಕೆ ಯಿಂದ ಮೈಸೂರಿಗೆ ಬಂದ 137 ಮಂದಿಗೂ ಮತ್ತೆ ಕೊರೋನಾ ಟೆಸ್ಟ್ – ಡಿಸಿ ರೋಹಿಣಿ ಸಿಂಧೂರಿ…

ಮೈಸೂರು,ಡಿಸೆಂಬರ್,24,2020(www.justkannada.in):  ಯು.ಕೆ ಯಿಂದ ಮೈಸೂರಿಗೆ 137 ಪ್ರಯಾಣಿಕರು ಹಿಂದಿರುಗಿದ್ದಾರೆ. ಅವರೆಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.Teachers,solve,problems,Government,bound,Minister,R.Ashok

ಈ ಕುರಿತು ಇಂದು ಮಾತನಾಡಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,  ಡಿಸೆಂಬರ್ 20ರವರೆಗೆ 119‌ಮಂದಿ‌ ಬ್ರಿಟನ್‌ನಿಂದ ಬಂದಿದ್ದಾರೆ. 21ನೇ ತಾರೀಖು 18 ಜನ ಬಂದಿದ್ದಾರೆ. 9 ಮಂಡ್ಯ, 10 ಕೊಡಗು, 2 ಮಂಗಳೂರಿನವರು ಇದ್ದಾರೆ. ಅವರಿಗೆ ಡಿಸ್ಟ್ರಿಕ್ಟ್‌ ವಾರ್ಡ್ ರೂಂನಿಂದ ಪೋನ್ ಮಾಡಲಾಗಿದೆ. ಎಲ್ಲರಿಗೂ ಒಮ್ಮೆ ಟೆಸ್ಟ್ ಆಗಿದೆ. 18 ಜನರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ತಿಳಿಸಿದರು.

ಇನ್ನು ನವೆಂಬರ್ 25 ರಿಂದ 119 ಜನ ಬಂದಿದ್ದಾರೆ. ಇದರಲ್ಲಿ ಬಹುತೇಕರಿಗೆ ಕ್ವಾರಂಟೈನ್ ಸಮಯ ಕೂಡ ಮುಗಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೆ ಟೆಸ್ಟ್ ಮಾಡಿಸಲಾಗುತ್ತೆ. ಹೊಸ ವೈರಸ್ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲ. ಮಕ್ಕಳಿಗೆ ಹೆಚ್ಚು ಪರಿಣಾಮ ಬೀರಬಹುದು ಅಂತ ಹೇಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜಿಲ್ಲೆಗೆ ಬಂದಿರೋದ್ರಿಂದ ಅವರ ಸಹಕಾರ ಕೋರಿದ್ದೇವೆ ಎಂದು  ಡಿಸಿ ರೋಹಿಣಿ ಸಿಂಧೂರಿ ಹೇಳಿದರು.137 -return - Mysore -from UK-corona test-DC Rohini Sindhuri.

 

Key words:137 -return – Mysore -from UK-corona test-DC Rohini Sindhuri.