ಸಿದ್ದರಾಮೇಶ್ವರನ ದೇವಾಲಯದಲ್ಲಿ ಕಳ್ಳರ ಕೈಚಳಕ: ಚಿನ್ನ, ಬೆಳ್ಳಿ ದೋಚಿದ ಖದೀಮರು.

ಮೈಸೂರು,ಜೂನ್,20,2023(www.justkannada.in): ಸಿದ್ದರಾಮೇಶ್ವರನ ದೇವಾಲಯದಲ್ಲಿ ಕಳ್ಳರು ಚಿನ್ನ, ಬೆಳ್ಳಿಯನ್ನ ದೋಚಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಸಿದ್ದರಾಮಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ.

ಸಿದ್ದರಾಮಯ್ಯನ ಹುಂಡಿಯ ಸಿದ್ದರಾಮೇಶ್ವರನ ದೇವಾಲಯ ಮೊನ್ನೆ ದೇವಾಲಯದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ ಮಾಡಲಾಗಿತ್ತು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದನ್ನ ಮನಗಂಡು ನಿನ್ನೆ ತಡರಾತ್ರಿ ಕಳ್ಳರು ತನ್ನ ಕೈಚಳಕ ತೋರಿದ್ದಾರೆ.

ದೇವಾಲಯದ ದ್ವಾರ ಮೀಟಿ ಬಾಗಿಲು ತೆಗೆದಿರುವ ಖದೀಮರು, ದೇವಾಲಯದ ಹುಂಡಿಯಲ್ಲಿದ್ದ ಅಪಾರ ಪ್ರಮಾಣದ ಚಿನ್ನ ಬೆಳ್ಳಿ ಹಾಗೂ ಹಣವನ್ನು ದೋಚಿದ್ದಾರೆ.  ಕದ್ದ ಹುಂಡಿಯನ್ನ ದೇವಾಲಯದ ಪಕ್ಕದ ಗದ್ದೆಯಲ್ಲಿ ಹೊಡೆದು ಹಣ ದೋಚಿ ಪರಾರಿಯಾಗಿದ್ದಾರೆ.

ಪ್ರಕರಣ ಬೆಳೆಕಿಗೆ ಬಂದ ನಂತರ ಸ್ಥಳಕ್ಕೆ ಆಗಮಿಸಿದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲಿಸಿದ್ದು, ಈ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Thieves-Siddarameshwara temple- stole –gold- silver – money.