ಪಾದಚಾರಿಗಳಿಗೆ ಗೂಡ್ಸ್ ಆಟೋ ಡಿಕ್ಕಿ : ಓರ್ವ ಯುವತಿ ಸಾವು

ಚಾಮರಾಜನಗರ,ಸೆಪ್ಟೆಂಬರ್,30,2020(www.justkannada.in)  : ಕೊಳ್ಳೇಗಾಲದಿಂದ ಮುಂಡಿಗುಂಡ ಗ್ರಾಮದ ಕಡೆಗೆ ತೆರಳುತ್ತಿದ್ದ ಗೂಡ್ಸ್ ಆಟೋ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ನಾಲ್ವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.jk-logo-justkannada-logo

ಪಟ್ಟಣದ ಮುಡಿಗುಂಡ ಗ್ರಾಮದವರಾದ ನಿವೇದಿತಾ(38), ಪವಿತ್ರ(36), ರಕ್ಷಿತಾ(12), ಪವಿತ್ರ(21) ಅಪಘಾತಕ್ಕೊಳಗಾದವರು. ಈ ನಾಲ್ವರು ಪೈಕಿ ಯುವತಿ ಪವಿತ್ರ(21) ಎಂಬುವವರು ಮೃತಪಟ್ಟಿದ್ದಾರೆ.

ಇಲ್ಲಿನ ಮುಡಿಗುಂಡ ಗ್ರಾಮದಲ್ಲಿರುವ ಮುಳ್ಳಾಚ್ಚಮ್ಮ ದೇವಾಲಯಕ್ಕೆ ಪೂಜೆಗೆಂದು ಪಾದಚಾರಿ ಮಾರ್ಗದಲ್ಲಿ  ನಿವೇದಿತಾ, ಪವಿತ್ರ, ರಕ್ಷಿತಾ, ಪವಿತ್ರ(21) ಎಂಬುವರು ಹೋಗುತ್ತಿದ್ದರು. ಈ ವೇಳೆ ಕೊಳ್ಳೇಗಾಲದ ಕಡೆಯಿಂದ ಬಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೂ ತೀವ್ರ ಪೆಟ್ಟಾಗಿದೆ.

ಮಾರ್ಗಮಧ್ಯದಲ್ಲಿ ಪವಿತ್ರ(21) ಕೊನೆಯುಸಿರು

ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಪವಿತ್ರ(21) ಮೃತಪಟ್ಟಿದ್ದಾರೆ. ಉಳಿದ ಮೂವರ ಪರಿಸ್ಥಿತಿ ಗಂಭೀರವಾಗಿದ್ದು, ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

key words : Goods-auto-collision-pedestrians-Death-young-woman