Saturday, September 12, 2026

BDA Apartments

ಗುಡ್ ನ್ಯೂಸ್: ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಭಾರಿ ಇಳಿಕೆ BDA JK_Adv BDA Adv
Home Front Page ಗುಡ್ ನ್ಯೂಸ್: ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಭಾರಿ ಇಳಿಕೆ

ಗುಡ್ ನ್ಯೂಸ್: ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಭಾರಿ ಇಳಿಕೆ

ಬೆಂಗಳೂರು, ಅಕ್ಟೋಬರ್ 25, 2021 (www.justkannada.in): ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಸಕ್ರಿಯ ಸೋಂಕಿನ ಪ್ರಮಾಣ 1,67 ಲಕ್ಷಕ್ಕೆ ಕುಸಿದಿದೆ. 14 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 3,41,89,774 ಕೋಟಿಗೆ ಏರಿಕೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನ ದೇಶದಲ್ಲಿ 14,306 ಹೊಸ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ. ಆದರೆ ಇದು ಇತ್ತೀಚಿನ ತಿಂಗಳಲ್ಲಿ ದೃಢಪಟ್ಟ ಕಡಿಮೆ ಪ್ರಕರಣಗಳು.

ಕಳೆದ 31 ದಿನಗಳಿಂದ ಪ್ರತಿ ನಿತ್ಯದ ಕೊರೊನಾ ಸೋಂಕಿನ ಪ್ರಮಾಣ 30 ಸಾವಿರದೊಳಗೆ ದಾಖಲಾಗುತ್ತಿರುವುದು ವಿಶೇಷವಾಗಿದೆ. ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.98.18ಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಮಾಣದಲ್ಲಿ ಭಾರಿ ಇಳಿಕೆಯಾಗುತ್ತಿದೆ ಎನ್ನಲಾಗಿದೆ.