Saturday, September 5, 2026

BDA Apartments

Home Front Page ವಿದೇಶಕ್ಕೆ ಹೋಗಲು ಸಮಯ ಇದೆ. ಕರ್ನಾಟಕಕ್ಕೆ ಬರಲು ಟೈಮ್ ಇಲ್ಲ- ಪ್ರಧಾನಿ ಮೋದಿ ವಿರುದ್ದ ಮಾಜಿ...

ವಿದೇಶಕ್ಕೆ ಹೋಗಲು ಸಮಯ ಇದೆ. ಕರ್ನಾಟಕಕ್ಕೆ ಬರಲು ಟೈಮ್ ಇಲ್ಲ- ಪ್ರಧಾನಿ ಮೋದಿ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ….

ಬೆಳಗಾವಿ,ಆ,28,2019(www.justkannada.in): ರಾಜ್ಯದಲ್ಲಿ ಭೀಕರ ನೆರೆ ಬಂದ್ರೂ ಕೇಂದ್ರ ಒಂದು ನಯಾ ಪೈಸ ಪರಿಹಾರ ನೀಡಿಲ್ಲ. ಪ್ರಧಾನಿ ಮೋದಿಗೆ ವಿದೇಶಕ್ಕೆ ಹೋಗಲು ಸಮಯ ಇದೆ. ಕರ್ನಾಟಕಕ್ಕೆ ಬರಲು ಟೈಮ್ ಇಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ. ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ರಾಜ್ಯದ ಜನತೆ ಆರಿಸಿ ಕಳುಹಿಸಿದ 25 ಸಂಸದರು ಏನು ಮಾಡುತ್ತಿದ್ದಾರೆ.  ರಾಜ್ಯಕ್ಕೆ ಎಷ್ಟು ಕೋಟಿ ಪರಿಹಾರ ನೀಡಿದ್ದಾರೆ ಎಂದು ಹೇಳಲಿ ಎಂದು ಕಿಡಿಕಾರಿದರು.

ಹಾಗೆಯೇ ರಾಜ್ಯದ ಆಡಳಿತ ಅಮಿತ್  ಶಾ ಕೈಯಲ್ಲಿ ಇದೆ. ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಓಡಾಡುತ್ತಿದ್ದಾರೆ. ಬಿಎಸ್ ವೈಗೆ ಬಹಳ ಜನ ಆರ್ ಎಸ್ ಎಸ್ ನವರು ಸಲಹೆ ನೀಡುತ್ತಾರೆ ಎಂದು ಟೀಕಿಸಿದರು. ಜತೆಗೆ  ಕೂಡಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ 5 ಸಾವಿರ ಕೋಟಿ ಪರಿಹಾರ ನೀಡಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

Key words: go abroad- no time – come – Karnataka-Former CM Siddaramaiah – against- PM Modi.