Friday, August 7, 2026

BDA Apartments

Home Front Page GBA ಚುನಾವಣೆಗೆ ಅವರು ಹೇಳದಿದ್ರೆ ನಾವೇ ಅಂತಿಮ ದಿನಾಂಕ ಘೋಷಿಸ್ತೇವೆ-ಜಿ.ಎಸ್ ಸಂಗ್ರೇಶಿ

GBA ಚುನಾವಣೆಗೆ ಅವರು ಹೇಳದಿದ್ರೆ ನಾವೇ ಅಂತಿಮ ದಿನಾಂಕ ಘೋಷಿಸ್ತೇವೆ-ಜಿ.ಎಸ್ ಸಂಗ್ರೇಶಿ

ಬೆಂಗಳೂರು,ಮೇ,8,2026 (www.justkannada.in):  ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಗೆ ಜಿಬಿಎಯವರು ಹೇಳದಿದ್ದರೇ  ನಮ್ಮ ಅಧಿಕಾರ ಬಳಸಿ ಅಂತಿಮ ದಿನಾಂಕ ನಾವೇ ಘೋಷಿಸುತ್ತೇವೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿಎಸ್ ಸಂಗ್ರೇಶಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಚುನಾವಣಾ ಆಯುಕ್ತ ಜಿಎಸ್ ಸಂಗ್ರೇಶಿ, ಜೂನ್ 14ರಿಂದ ಜೂನ್ 24ರೊಳಗೆ ಜಿಬಿಎಯವರು ದಿನಾಂಕ ಹೇಳದಿದ್ದರೇ ನಮ್ಮ ಅಧಿಕಾರ ಬಳಸಿ ಅಂತಿಮ ದಿನಾಂಕ ನಾವೇ ಘೋಷಿಸುತ್ತೇವೆ. ರಾಜ್ಯ ಚುನಾವಣಾ ಆಯೋಗಕ್ಕೆ ದಿನಾಂಕ ಘೋಷಿಸುವ ಅಧಿಕಾರವಿದೆ. ಸಿಬ್ಬಂದಿ ಇಲ್ಲ ಮತ್ತೊಂದು ಇಲ್ಲ ಅಂತಾ ಅವರು ಹೇಳುತ್ತಾ ಬಂದಿದ್ದಾರೆ.  ಬ್ಯಾಲೆಟ ಪೇಪರ್ ಅಥವಾ ಇವಿಎಂ ಬಳಸಬೇಕಾ ಅಂತಾ ಮುಂದೆ ಹೇಳುತ್ತೇವೆ ಎಂದರು.

ಜಿಬಿಎ ವಿಚಾರದಲ್ಲಿ ಸುಪ್ರೀಂಕೋರ್ಟ್ ಕ್ಲಿಯರ್ ಆಗಿ ಹೇಳಿದೆ. ಚುನಾವಣೆ ಮುಗಿಸೇ ಬನ್ನಿ ಅಂತಾ ಹೇಳುತ್ತಾ ಇದೆ.  ಸಿಬ್ಬಂದಿ ಕೊರತೆ ಜನಗಣತಿ ಬಗ್ಗೆ ಸುಪ್ರಿಂ ಕೋರ್ಟ್ ನಲ್ಲಿ ಅಪೀಲು ಹೋಗಿದ್ದಾರೆ ಎಂದು  ಜಿಎಸ್ ಸಂಗ್ರೇಶಿ ತಿಳಿಸಿದರು.

Key words: GBA elections, announce, State Election Commissioner, G.S. Sangreshi