Tuesday, September 22, 2026

BDA Apartments

ಮೈಸೂರಿನಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟ: ಐದು ಮಂದಿಗೆ ಗಾಯ BDA JK_Adv BDA Adv
Home Crime ಮೈಸೂರಿನಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟ: ಐದು ಮಂದಿಗೆ ಗಾಯ.

ಮೈಸೂರಿನಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟ: ಐದು ಮಂದಿಗೆ ಗಾಯ.

ಮೈಸೂರು,ಜನವರಿ,4,2023(www.justkannada.in): ಬೆಳ್ಳಂ ಬೆಳಗ್ಗೆ ಮೈಸೂರಿನಲ್ಲಿ  ಮನೆಯೊಂದರಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟಗೊಂಡು 5 ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಬೆಳ್ಳಿಗೆ 7.15 ರಲ್ಲಿ ಮೈಸೂರಿನ ಬನ್ನಿಮಂಟಪದ ಬಳಿ ಇರುವ ಅಗ್ನಿಶಾಮಕ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಹಾಲು ಕಾಯಿಸಲು ಹೋಗಿ ಈ ದುರ್ಘಟನೆ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ 5 ಜನರಿಗೆ ಗಾಯಗಳಾಗಿದೆ.  ಘಟನೆಯಲ್ಲಿ ಗೀತಾ(34) ಮಗಳು ಮೌನ(10) ಮಗ ಮಿತ್ತುನ್(6) ಹಾಗೂ ಪಕ್ಕದ ಮನೆ ಸವಿತಾ (38)  ಭಾಗ್ಯಮ್ಮ(62)ಗೆ ಗಾಯಗಳಾಗಿದೆ.  ಗೃಹಿಣಿ ಗೀತಾ(34)ಗೆ  ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟ cylender

ಮೈಸೂರಿನ ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ.

Key words: Gas cylinder -explosion – Mysore-10 people -injured