ಚಾಮುಂಡಿ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ ಬೀಳುತ್ತೆ ದಂಡ: ಇಂದಿನಿಂದ ಆದೇಶ ಜಾರಿ.

ಮೈಸೂರು,ಆಗಸ್ಟ್,1,2023(www.justkannada.in): ಮೈಸೂರಿನ ಚಾಮುಂಡಿಬೆಟ್ಟವನ್ನು  ಕಸ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು  ಕೈಗೊಳ್ಳಲಾಗಿದ್ದು ಇನ್ಮುಂದೆ ಚಾಮುಂಡಿ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿದರೇ ದಂಡ ಬೀಳಲಿದೆ.

ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಿಸಾಕಿದರೆ 500 ರೂ ದಂಡ ಬೀಳಲಿದ್ದು, ಈ ಕುರಿತು ಚಾಮುಂಡಿಬೆಟ್ಟದ ಅಂಗಡಿಯವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮೊದಲ ಬಾರಿಗೆ ತ್ಯಾಜ್ಯ ಬಿಸಾಡಿದರೆ 2,500 ರೂ, ಎರಡನೇ ಬಾರಿಗೆ 5 ಸಾವಿರ ರೂ. ಮೂರನೇ ಬಾರಿಗೆ 10 ಸಾವಿರ ರೂ. ದಂಡ ಹಾಗೂ ಲೈಸನ್ಸ್ ರದ್ದುಗೊಳ್ಳಲಿದೆ. ಇನ್ನು ಅರಣ್ಯದ ಒಳಗೆ ತೆರಳಿದರೆ 500 ರೂ. ದಂಡ, ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1 ಸಾವಿರ ರೂ. ದಂಡ ಬೀಳಲಿದೆ. ಈ ಕುರಿತು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದು, ಇಂದಿನಿಂದ ಆದೇಶ ಜಾರಿಯಾಗಲಿದೆ.

ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮದ್ಯ ಹಾನಿಕಾರಕ ವಸ್ತುಗಳನ್ನ ಸಾಗಿಸಿದರೆ 5 ಸಾವಿರ ರೂ.  ಹಾಗೂ ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೆ 1 ಸಾವಿರ ದಂಡ ರೂ. ದಂಡ ಬೀಳಲಿದ್ದು ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರು ಈ ಬಗ್ಗೆ ಎಚ್ಚರ ವಹಿಸಬೇಕಿದೆ.

Key words: Garbage – plastic free -Chamundi Hill- fine-order