3ನೇ ದಿನವೂ ತಮಿಳುನಾಡಿಗೆ ಹರಿದ ಕಾವೇರಿ ನೀರು: ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಕುಸಿತ.

ಮಂಡ್ಯ,ಸೆಪ್ಟಂಬರ್,1,2023(www.justkannada.in):  ಸರಿಯಾಗಿ ಮಳೆಯಾಗದೇ ಕೆಆರ್ ಎಸ್ ಡ್ಯಾಂ ಭರ್ತಿಯಾಗದಿದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ.

ಮೂರನೇ ದಿನವೂ ಸಹ ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿದಿದ್ದು ಇದೀಗ ಕೆಆರ್ ಎಸ್ ಡ್ಯಾಂನ ನೀರಿನ ಮಟ್ಟ  ತೀವ್ರ ಕುಸಿತ ಕಂಡಿದೆ. 124.80 ಅಡಿ ಗರಿಷ್ಟ ನೀರಿನ ಮಟ್ಟ ಹೊಂದಿರುವ ಕೆಆರ್ ಎಸ್ ಡ್ಯಾಂ ಸದ್ಯಕ್ಕೆ 100 ಅಡಿಗೆ ಕುಸಿದಿದ್ದು ಆ ಭಾಗದ ರೈತರು ಜನರಿಗೆ  ಆತಂಕ ಶುರುವಾಗಿದೆ.

ಕೆಆರ್ ಎಸ್   ಜಲಾಶಯಕ್ಕೆ ಒಳ ಹರಿವು 1635 ಕ್ಯುಸೆಕ್ ಇದ್ದು  ಹೊರ ಹರಿವು 7180  ಕ್ಯೂಸೆಕ್ ಇದೆ. ಇನ್ನು ನಮ್ಮ ರಾಜ್ಯದ ರೈತರು, ಜನರಿಗೆ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ರೈತರು ವಿವಿಧ ರೈತಪರ ಸಂಘಟನೆಗಳು ಕನ್ನಡಪರ ಸಂಘಟನೆಗಳು  ತೀವ್ರ ಪ್ರತಿಭಟನೆ ನಡೆಸುತ್ತಿವೆ.

Key words: Cauvery water – Tamil Nadu – 3rd day-KRS Dam- water- level- falling.