Monday, September 21, 2026

BDA Apartments

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ಮೂವರು ಅಪರಾಧಿಗಳಿಗೆ 20 ವರ್ಷ ಜೈಲ...
Home Crime ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ಮೂವರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ…

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ಮೂವರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ…

ಮೈಸೂರು,ಮಾರ್ಚ್,16,2021(www.justkannada.in): ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನ್ಯಾಯಾಲಯ ಮೂವರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.jk

ನದೀಂ ಪಾಷಾ, ತನ್ವೀರ್ ಪಾಷಾ ಹಾಗೂ ಸದ್ದಾಂ ಹುಸೇನ್ ಶಿಕ್ಷೆಗೆ ಒಳಗಾದವರು. ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಒಂದನೇ ಶೀಘ್ರಗತಿ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿದೆ. ಮೂವರು ಅಪರಾಧಿಗಳಿಗೆ 20 ವರ್ಷ ಜೈಲು ಹಾಗೂ ತಲಾ 50 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ಆದೇಶಿಸಿದ್ದಾರೆ.

14/01/2016ರಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿತ್ತು. ಬಾಲಕಿಯನ್ನ ಡಾಬಾಗೆ ಕರೆದಕೊಂಡು ಹೋಗಿ ಜ್ಯೂಸ್ ಕುಡಿಸಿ ಗೋಬಿ ತಿನ್ನಿಸಿ ಅಪರಾಧಿಗಳು ಅತ್ಯಾಚಾರ ಮಾಡಿದ್ದರು.  ಅತ್ಯಾಚಾರ ನಡೆಸಿದ ನಂತರ ಅಪ್ರಾಪ್ತೆಯ ಕುಟುಂಬವನ್ನೇ ಕೊಲೆ ಮಾಡುವುದಾಗಿ  ಅತ್ಯಾಚಾರಿಗಳು ಬೆದರಿಕೆ ಹಾಕಿದ್ದರು.

gang rape- case –impropriety-convicted - sentenced - 20 years – prison- mysore court
ಕೃಪೆ-internet

ಸಂತ್ರಸ್ಥೆ ಪರ ಸರ್ಕಾರಿ ಅಭಿಯೋಜಕರಾದ ಮಂಜುಳಾ ವಾದ ಮಂಡಿಸಿದರು. ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಿದ್ದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಕೊಲೆ ಬೆದರಿಕೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಾನೂನು ನೆರವಾಗಿ ಸಂತ್ರಸ್ತ ಬಾಲಕಿಗೆ 7 ಲಕ್ಷ ಪರಿಹಾರ ನೀಡುವಂತೆಯೂ ಕೋರ್ಟ್ ಆದೇಶ ಹೊರಡಿಸಿದೆ.

Key words: gang rape- case –impropriety-convicted – sentenced – 20 years – prison- mysore court