ಮೈಸೂರಿನಲ್ಲಿ ತಪಾಸಣೆ ನೆಪದಲ್ಲಿ ಯುವಕನೊಬ್ಬನಿಗೆ ಥಳಿಸಿದ ಪೊಲೀಸರು : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ 

ಮೈಸೂರು,ನವೆಂಬರ್,12,2020(www.justkannada.in) : ನಗರದಲ್ಲಿ ಪೊಲೀಸರು ವಾಹನ ತಪಾಸಣೆ ನೆಪದಲ್ಲಿ ಯುವಕನೊಬ್ಬನಿಗೆ ಥಳಿಸಿರುವ ಘಟನೆ ಗುರುವಾರ ನಡೆದಿದೆ.kannada-journalist-media-fourth-estate-under-lossಯುವಕನಿಗೆ ತಲೆಯಿಂದ ರಕ್ತ ಬರುವಂತೆ ಥಳಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆ ಹೆಬ್ಬಾಳು ಇನ್ಫೋಸಿಸ್ ರಸ್ತೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಈ ದೃಶ್ಯ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಹೆಬ್ಬಾಳು ಇನ್ಫೋಸಿಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು, ವಾಹನದಲ್ಲಿ ಸಾಗುತ್ತಿದ್ದ ಯುವಕನೊಬ್ಬನಿಗೆ ತಲೆಯ ಹಿಂಬದಿ ಭಾಗಕ್ಕೆ ಥಳಿಸುತ್ತಾರೆ. ಈ ವೇಳೆ ಆತನ ತಲೆಗೆ ಗಾಯವಾಗಿದೆ. ಬಳಿಕ ಯುವಕ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರು ಥಳಿಸಿದ ಸಂದರ್ಭದಲ್ಲಿ ಯುವಕ ಅವರನ್ನು ಪ್ರಶ್ನಿಸುತ್ತಾನೆ. ನಾನು ನಿಮಗೆ ಚಾಲನಾ ಪರವಾನಗಿ ತೋರಿಸಿಲ್ಲವಾ? ಇನ್ಶುರೆನ್ಸ್ ಇಲ್ಲವಾ? ಡ್ರಂಕ್ ಆ್ಯಂಡ್ ಡ್ರೈವ್ ಮಾಡಿದ್ದೇನಾ? ಎಂದು ಪ್ರಶ್ನಿಸುವ ಯುವಕ, ಮತ್ಯಾಕೆ ನನಗೆ ರಕ್ತ ಬರುವ ಹಾಗೆ ಹೊಡೆದಿದ್ದೀರಿ ಎಂದು ಪ್ರಶ್ನಿಸುವುದು ವಿಡಿಯೋದಲ್ಲಿ ದಾಖಲಾಗಿದೆ.

young,man,Mysore,Police,beaten,video,viral,social,media

key words : young-man-Mysore-Police-beaten-video-viral-a-social-media