ಕೆಎಸ್ ಆರ್ ಟಿಸಿಯಿಂದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್.

ಬೆಂಗಳೂರು,ಸೆಪ್ಟಂಬರ್,10,2022(www.justkannada.in):  ಕೆಎಸ್ ಆರ್ ಟಿಸಿಯಿಂದ  ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು,   ಮುಂದಿನ ತಿಂಗಳಿನಿಂದ  1ನೇ ತಾರೀಖಿಗೆ ವೇತನ ಜಾರಿಯಾಗಲಿದೆ.

ಕಳೆದ ಎರಡು ವರ್ಷಗಳಿಂದ ಕೊರೋನಾ ಹಾವಳಿಯಿಂದಾಗಿ ವೇತನ ನೀಡುವುದು ವಿಳಂಬವಾಗುತ್ತಿತ್ತು. ಆದರೆ ಇದೀಗ ಕೋವಿಡ್ ಕಡಿಮೆಯಾಗಿ ನಿಗಮ ಸಹಜ ಸ್ಥಿತಿಗೆ ಬಂದ ಹಿನ್ನಲೆ ಅಕ್ಟೋಬರ್ ನಿಂದ 1ನೇ ತಾರೀಖಿಗೆ ನೌಕರರ ವೇತನ ಜಾರಿ ಮಾಡಲು ಮುಂದಾಗಿದೆ ಎನ್ನಲಾಗಿದೆ.transport -workers – strike- Government-decision –retired- staff -run - bus.       

ಮುಂದಿನ ತಿಂಗಳ ಮೊದಲ ದಿನವ ಸಂಬಳ ಪಾವತಿ ಮಾಡುವಂತೆ ಕೆಎಸ್ ಆರ್ ಟಿಸಿ ಎಂಡಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

Key words: Good news – transport -employees – KSRTC.