ಮಹಿಳಾ ಟಿ20 ವಿಶ್ವಕಪ್ ಫೈನಲ್: ಮಹಿಳಾ ದಿನಾಚರಣೆಯಂದೇ ಇತಿಹಾಸ ನಿರ್ಮಿಸುವ ತವಕದಲ್ಲಿ ಹರ್ಮನ್ ಪ್ರಿತ್ ಕೌರ್ ಅಂಡ್ ಟೀಂ…

ನವದೆಹಲಿ,ಮಾ,8,2020(www.justkannada.in):  ಇಂದು ವಿಶ್ವ ಮಹಿಳಾ ದಿನಾಚರಣೆ. ಈ ದಿನದಂದೇ ಮಹಿಳಾ ಟಿ20 ವಿಶ್ವಕಪ್ ಫೈನಲ್ ನಡೆಯುತ್ತಿದ್ದು ಭಾರತ ಮತ್ತು ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗಾಗಿ ಕಾದಾಟ ನಡೆಸಲು ಸಜ್ಜಾಗಿವೆ.

ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾಮಣಿಯರು ಇಂದು ಆಸ್ಟ್ರೇಲಿಯಾದ ಮೆಲ್ಬೊರ್ನ್‌ ಅಂಗಣದಲ್ಲಿ ಸೆಣಸಾಡಲಿದ್ದು, ಇಂದಿನ ಫೈನಲ್ ನಲ್ಲಿ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿ ಹರ್ಮನ್ ಪ್ರಿತ್ ಕೌರ್  ನೇತೃತ್ವದ ಟೀಂ ಇಂಡಿಯಾ ವನಿತೆಯರು ಕಾತರರಾಗಿದ್ದಾರೆ.

ಈಗಾಗಲೇ ಎರಡು ಭಾರಿ ವಿಶ್ವ ಕಪ್ ಗೆದ್ದಿರುವ ಆಸ್ಟ್ರೇಲಿಯಾ ಮಹಿಳಾ ತಂಡವೂ ಸಹ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಹೀಗಾಗಿ ಹರ್ಮನ್ ಪ್ರಿತ್ ಕೌರ್  ನೇತೃತ್ವದ ಟೀಂ ಇಂಡಿಯಾ  ವಿಶ್ವಕಪ್ ಗೆದ್ದು ಇಂದು ಭಾರತಕ್ಕೆ ಮಹಿಳಾ ದಿನಾಚರಣೆ ಉಡುಗೊರೆ ನೀಡಲಿದ್ದಾರೆಯೇ ಎಂಬುದನ್ನ ಕಾದು ನೋಡಬೇಕಿದೆ. ಟೀಂ ಇಂಡಿಯಾ –ಇಂಗ್ಲೇಂಡ್ ಸೆಮಿಫೈನಲ್ ಪಂದ್ಯ ರದ್ಧಾದ ಹಿನ್ನೆಲೆ ಹೆಚ್ಚು ಪಂದ್ಯಗಳನ್ನ ಗೆದ್ದಿದ್ದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿ ಇಂದು  ಆಸ್ಟ್ರೇಳಿಯಾ ವನಿತೆಯರ ವಿರುದ್ದ ಕಾದಾಡಲಿದೆ.

Key words: Women’s -T20 World Cup- Final- Herman Prit Kaur –india – Australia