ತಾಯಿ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಬಿಜೆಪಿ ಮುಖಂಡ ಆನಂದ್ ಕೊಲೆ..? ಪೊಲೀಸರ ಮುಂದೆ ಆರೋಪಿ ಹೇಳಿಕೆ….

ಮೈಸೂರು,ಮಾ,8,2020(www.justkannada.in): ಬಿಜೆಪಿ ಮುಖಂಡ ವಡ್ಡಾ ಆನಂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ಆರೋಪಿ ಬಸವರಾಜ್ ಪೊಲೀಸರಿಗೆ ಶರಣಾಗಿದ್ದು ಕೊಲೆ ಮಾಡಲು ಕಾರಣವೇನೆಂಬುದನ್ನ ಬಿಚ್ಚಿಟ್ಟಿದ್ದಾನೆ.

ತಾಯಿ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಶರಣಾದ ಕೊಲೆ ಆರೋಪಿ ಬಸವರಾಜ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಬಸವರಾಜ್ ವಿರುದ್ಧ ಆನಂದ್ ಪತ್ನಿ ಪವಿತ್ರಾ ಅವರು ಪ್ರಕರಣ ದಾಖಲಿಸಿದ್ದರು. ಇದನ್ನು ತಿಳಿಯುತ್ತಲೇ ವಕೀಲರ ಮೂಲಕ ಬಸವರಾಜು ಪೊಲೀಸರಿಗೆ ಶರಣಾಗಿದ್ದಾನೆ.

ಮದ್ಯ ಸೇವಿಸುತ್ತ ಕುಳಿತ್ತಿದ್ದಾಗ ತಾಯಿಯ ಬಗ್ಗೆ ಕೀಳಾಗಿ ಮಾತನಾಡಿದ ಹೀಗಾಗಿ ಕೋಪಗೊಂಡು ಹೊಡೆದಿದ್ದೇನೆ ಎಂದು ಆರೋಪಿ ಬಸವರಾಜು ಪೊಲೀಸರೆದುರು ಹೇಳಿಕೆ ನೀಡಿದ್ದಾನೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.  ಬಸವರಾಜ್ ನಿನ್ನೆ ನ್ಯಾಯಾಲಯಕ್ಕೆ ಶರಣಾಗಿದ್ದು, ಸದ್ಯ ಬಸವರಾಜ್ ಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.

ಕಳೆದ ಎರಡು ದಿನಗಳ ಹಿಂದೆ ಗೆಳೆಯರೊಂದಿಗೆ ಸಂಭ್ರಮದಿಂದ ಬರ್ತ್‌ ಡೇ ಆಚರಿಸಿಕೊಂಡು ಬಂದಿದ್ದ ಬಿಜೆಪಿ ಮುಖಂಡ ಆನಂದ್ ಅಲಿಯಾಸ್ ವಡ್ಡ ಆನಂದ್ ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ  ಹತ್ಯೆಗೀಡಾಗಿದ್ದರು.

Key words: mysore- BJP leader -Anand –murder- mother -Accused -police