ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರ: ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ.

ಬೆಂಗಳೂರು,ಜುಲೈ,1,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಅವರೇ ರಾಜ್ಯ ಪ್ರವಾಸಕ್ಕೂ ಮುನ್ನ ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.jk

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ 24 ಮಂದಿಯ ಮನೆಗೆ ಭೇಟಿ ನೀಡಿದ್ದೇನೆ. ಇನ್ನುಳಿದ ಮನೆಗಳಿಗೆ ಭೇಟಿ ನೀಡಲು ಆಗಲಿಲ್ಲ. ಹೀಗಾಗಿ ಚೆಕ್ ನೀಡಿದ್ದೇನೆ. ಘಟನೆ ನಡೆದ ಕೂಡಲೇ ನಾನು ಮತ್ತು ವಿಪಕ್ಷ ನಾಯಕರು ಅಲ್ಲಿಗೆ ಹೋಗಿದ್ದವು. ಆದರೆ ಸಿಎಂ ಬಿಎಸ್ ವೈ ಹೋಗಲಿಲ್ಲ. ದುರಂತದಲ್ಲಿ 36 ಜನರ ಮೃತಪಟ್ಟಿದ್ದಾರೆ ಎಂದು ವರದಿ ನೀಡಲಾಗಿತ್ತು. ಆದರೆ ಸರ್ಕಾರ 24 ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದಿದೆ. ನ್ಯಾಯಾಲಯ ಹೇಗೆ ಪರಿಹಾರ ನೀಡುತ್ತೀರಿ ಎಂದು ಪ್ರಶ್ನಿಸಿದೆ. ಜನರ ನೋವು ಸರ್ಕಾರಕ್ಕೆ ಅರ್ಥ ಆಗಲ್ಲ. ಆದರೆ ಜನರ ನೋವು ನಮಗೆ ಮತ್ತು ಕೋರ್ಟ್ ಗೆ ಅರ್ಥವಾಗುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ದುರಂತದಲ್ಲಿ ಮೃತಪಟ್ಟವರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಆದರೆ ಪರಿಹಾರ ಪಡೆಯಲು ಅರ್ಜಿಸಲ್ಲಿಸಲು ಡೆತ್ ಸರ್ಟಿಫಿಕೇಟ್ ನೀಡಿಲ್ಲ. ಡೆತ್ ಸರ್ಟಿಫಿಕೇಟ್ ಇಲ್ಲದೆ ಹೇಗೆ ಅರ್ಜಿ ಸಲ್ಲಿಸುತ್ತಾರೆ. ಸರ್ಕಾರ ಪರಿಹಾರ ನೀಡಲು ಆಗದಿದ್ದರೇ ಧೈರ್ಯವನ್ನಾದರೂ ತುಂಬಿ ಎಂದು ಡಿಕೆಶಿ ಕಿಡಿಕಾರಿದರು.

ಜನರಿಗಾಗಿ ರಾಜ್ಯ ಸರ್ಕಾರ ಕೆಲಸ ಮಾಡದ ಹಿನ್ನೆಲೆ ಕಾಂಗ್ರೆಸ್ ಜನರಿಗಾಗಿ ಕೆಲಸ ಮಾಡುತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: Visit – Chamarajanagar –Oxygen- Disaster-  DK Shivakumar- demands -CM BS Yeddyurappa