68ನೇ ಮನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

Promotion

ಬೆಂಗಳೂರು, ಆಗಸ್ಟ್, 30, 2020(www.justkannada.in)  : ಎಲ್ಲರೂ ಒಟ್ಟಾಗಿ ಸ್ವಾವಲಂಬಿ ಭಾರತ ಕಟ್ಟಬೇಕಿದೆ. ಇದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಯುವಕರ ಪಾತ್ರ ದೊಡ್ಡದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

jk-logo-justkannada-logo

68ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಸಣ್ಣ ಉದ್ಯಮಕ್ಕೆ ಸರಕಾರ ಒತ್ತು ನೀಡುತ್ತಿದೆ. ಸ್ಮಾರ್ಟ್ ಆಪ್ ಗಳಿಗೆ ಹೆಚ್ಚಿನ ಬೆಂಬಲ ನೀಡಬೇಕಿದೆ. ಆಟಿಕೆ ತಯಾರಿಕೆಯಲ್ಲಿ ಭಾರತವು ಹಬ್ ಆಗಬಹುದು. ಹೀಗಾಗಿ, ಕಂಪ್ಯೂಟರ್ ಗೇಮ್ ಗಳಲ್ಲಿಯೂ ಸ್ವದೇಶಿ ಆಟಗಳನ್ನು ಬಳಸುವಂತೆ ಸಲಹೆ ನೀಡಿದರು.

ವಿಜ್ಞಾನದ ಬಗ್ಗೆ ಮಕ್ಕಳು ಹೆಚ್ಚಿನ ಆಸಕ್ತಿವಹಿಸಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿಶೇಷ ಲಕ್ಷ್ಯವಹಿಸಲಾಗುತ್ತಿದೆ. ವಿಜ್ಞಾನದ ಬಗ್ಗೆ ಮಕ್ಕಳು ಹೆಚ್ಚಿನ ಆಸಕ್ತಿ ಹೊಂದಬೇಕು. ವಿಜ್ಞಾನದ ಮೇಲಿನ ಆಸಕ್ತಿ ಸಂಶೋಧನೆಗೆ ಪ್ರೇರೆಪಿಸುತ್ತದೆ. ವಿದ್ಯಾರ್ಥಿಗಳಿಗೆ ಬಳಕೆಯಾಗುವ ಹಲವು ಆಪ್ ಗಳಿದ್ದು, ಈ ಕುರಿತು ವಿದ್ಯಾರ್ಥಿಗಳು ತಿಳಿಯಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಿ

ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಬೇಕು. ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರವೇ ದೇಶವನ್ನು ಕಟ್ಟಲು ಸಾಧ್ಯ. ಮಕ್ಕಳ ಆರೋಗ್ಯ ಕಾಪಾಡುವುದರಲ್ಲಿ ಪೋಷಕರ ಪಾತ್ರ ದೊಡ್ಡದು. ಪೌಷ್ಠಿಕ ಆಹಾರವನ್ನು ಮಕ್ಕಳು ಸೇವಿಸಬೇಕು ಎಂದು ಹೇಳಿದರು.

ದೇಶಿ ನಿರ್ಮಿತ ವಸ್ತುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಮನೆಗಳಲ್ಲೇ ಆಟಿಕೆಗಳನ್ನು ತಯಾರು ಮಾಡಲಾಗುತ್ತಿದೆ. ವಿಶ್ವದಲ್ಲಿ ಆಟಿಕೆಯ ಉದ್ಯೋಗ ಸೃಷ್ಟಿಯಾಗಲಿದ್ದು, ಚನ್ನಪಟ್ಟಣದ ಆಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅನ್ನದಾತರಿಗೆ ನಮನ

ದೇಶದ ಅಭಿವೃದ್ಧಿಗೆ ರೈತರು ಬೆವರು ಸುರಿಸುತ್ತಿದ್ದಾರೆ. ಮುನ್ನೇಚರಿಕಾ ಕ್ರಮಗಳೊಂದಿಗೆ ಗಣೇಶೋತ್ಸವ ಆಚರಿಸಲಾಗಿದೆ. ದೇಶಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದೆ. ದೇಶದ ಹಲವೆಡೆ ಉತ್ತಮ ಮಳೆಯಾಗಿದೆ. ಉತ್ತಮ ಮಳೆಯಿಂದ ಅನ್ನದಾತ ತುಂಬಾ ಖುಷಿಯಾಗಿದ್ದಾನೆ. ಕೊರೊನಾ ನಡುವೆ ನಮ್ಮ ಹೊಟ್ಟೆ ತುಂಬಿಸಲು ರೈತರು ಶ್ರಮಿಸುತ್ತಿದ್ದಾರೆ ಎಂದು ರೈತರಿಗೆ ನಮನ ಸಲ್ಲಿಸಿದರು.

ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ

ದೇಶದ ಜನರು ಕೊರೊನಾ ಜೊತೆಗೆ ಬದುಕುತ್ತಿದ್ದಾರೆ. ಕೊವಿಡ್ ಹಿನ್ನೆಲೆ ಮಾರ್ಗಸೂಚಿ ಕಡ್ಡಾಯವಾಗಿದೆ. ಕಾರ್ಯಕ್ರಮಗಳ ಆಯೋಜನಯೆಲ್ಲಿ ಎಚ್ಚರಿಕೆವಹಿಸಿ. ರೈತರ ಶ್ರಮದಿಂದ ಹಬ್ಬಗಳು ವರ್ಣರಂಜಿತವಾಗಿವೆ. ಜನರ ಸಹನೆ, ತಾಳ್ಮೆ ಮೆಚ್ಚುವಂತಹದ್ದು ಎಂದು ತಿಳಿಸಿದರು.

key words : What-did-Prime-Minister-Narendra Modi-68th -Man Ki Baat?