ನಾವು ಎರಡು, ಮೂರನೇ ಪಂಕ್ತಿಯಲ್ಲಿದ್ದೇವೆ : ಶಾಸಕ ಎಸ್.ಎ.ರಾಮದಾಸ್ ಹೀಗೆ ಹೇಳಿದ್ದೇಕೆ..? 

ಮೈಸೂರು,ನವೆಂಬರ್,07,2020(www.justkannada.in) : ಸರಕಾರ ರಚನೆ ಮಾಡುವಾಗ ಹೊರಗಡೆಯಿಂದ ಕರೆದುಕೊಂಡು ಬಂದವರನ್ನು ಊಟಕ್ಕೆ ಮೊದಲ ಪಂಕ್ತಿಯಲ್ಲಿ ಕೂರಿಸಿದ್ದೇವೆ. ನಾವು ಎರಡು, ಮೂರನೇ ಪಂಕ್ತಿಯಲ್ಲಿದ್ದು, ರಾಜ್ಯ ಚೆನ್ನಾಗಿರಲಿ ಎಂದು ಬಯಸುವವರು ನಾವು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

jk-logo-justkannada-logo

ಊಟ ಸಿಗದಿದ್ದರೂ ಪರವಾಗಿಲ್ಲ ರಾಜ್ಯ ಚನ್ನಾಗಿರಲಿ

ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ಸಂಪುಟ ರಚನೆಯಲ್ಲಿ ಮಂತ್ರಿ ಸ್ಥಾನ ದೊರೆಯುವುದೇ ಎಂಬ ಪ್ರಶ್ನೆಗೆ ಉತ್ತರಿಸಿ, ಸರಕಾರ ರಚನೆ ಮಾಡುವ ಸಂದರ್ಭ ಕೆಲವರನ್ನು ಹೊರಗಡೆಯಿಂದ ಕರೆದುಕೊಂಡು ಬಂದಿದ್ದೇವೆ. ಸಹಜವಾಗಿ ಊಟ ಹಾಕುವಾಗ ಮೊದಲು ಅವರಿಗೆ ಆದ್ಯತೆ ನೀಡಲಾಗಿದೆ. ನಾವು ಎರಡನೇ, ಮೂರನೇ ಪಂಕ್ತಿಯಲ್ಲಿದ್ದು, ನಮಗೆ ಊಟ ಸಿಗದಿದ್ದರೂ ಪರವಾಗಿಲ್ಲ ರಾಜ್ಯ ಚೆನ್ನಾಗಿರಲಿ ಎಂದು ಬಯಸುವವರು ನಾವು ಎಂದರು.

ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ನೀಡುತ್ತಿದ್ದೇನೆ

ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಸೇರಿದ್ದು, ಜಿಲ್ಲಾ ಮಂತ್ರಿಯಾಗಿ ಯಾರೇ ಬಂದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ನೀಡುತ್ತಿದ್ದೇನೆ. ನಾನು ಜೀವನದಲ್ಲಿ ಯಾವುದೇ ಆಸೆ,ಆಕಾಂಕ್ಷೆಯಿಟ್ಟುಕೊಂಡವನಲ್ಲ. ಸುಖ, ದುಃಖವನ್ನು ಸಮಾನವಾಗಿ ನೋಡುತ್ತೇನೆ ಎಂದು ಹೇಳಿದರು.

ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಮುಂದಾಗಿದ್ದೇನೆ

ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಮುಂದಾಗಿದ್ದೇನೆ. ಉದ್ಯೋಗ ಕಲ್ಪಿಸುವುದು ಸೇರಿದಂತೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಮಾಡುತ್ತಿದ್ದೇನೆ. ಕೊರೊನಾ ಪತ್ತೆಯಾದ ದಿನದಿಂದ ನಿರಂತರವಾಗಿ ಜಾಗೃತಿ ಮೂಡಿಸಿದ ಪರಿಣಾಮ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬರುತ್ತಿದೆ ಎಂದು ತಿಳಿಸಿದರು.

We're-second-third-line-Abou-Volume-Structure-Statement-MLA S.A.Ramadas

key words : We’re-second-third-line-Abou-Volume-Structure-
Statement-MLA S.A.Ramadas