“ಒಡೆಯರ್ ಪ್ರತಿಮೆಯ ಮುಖದ ಮೇಲೆ ಜೇನು ಗೂಡು” : ತೆರವಿಗಾಗಿ ಸಾರ್ವಜನಿಕರ ಒತ್ತಾಯ

ಮೈಸೂರು,ಮಾರ್ಚ್,13,2021(www.justkannada.in) :  ನಗರದ ಹೃದಯಭಾಗ ಕೆ.ಆರ್.ವೃತ್ತದಲ್ಲಿರುವ ಕೃಷ್ಣರಾಜೇಂದ್ರ ಒಡೆಯರ್ ಅವರ ಪ್ರತಿಮೆಯ ಮುಖದ ಮೇಲೆ ಜೇನುಹುಳು ಗೂಡು ಕಟ್ಟಿದೆ.

jkಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ ಈ ಭಾಗದಲ್ಲಿ ವಾಯುವಿಹಾರಕ್ಕಾಗಿ ತೆರಳಲಿದ್ದು, ಯಾರಾದರೂ ಕಿಡಿಗೇಡಿಗಳು ಅಕಸ್ಮಾತ್ ಕಲ್ಲು ಬಿಸಾಡಿದಲ್ಲಿ ಹುಳುಗಳು ರೊಚ್ಚಿಗೆದ್ದು ದಾಳಿ ನಡೆಸುವ ಸಾಧ್ಯತೆ ಎದುರಾಗಿದೆ.

ಒಡೆಯರ್ ಪ್ರತಿಮೆಯ ಮುಖಕ್ಕೆ ಜೇನುಗೂಡು ಕಟ್ಟಿರುವುದರಿಂದ ಮುಖದ ಭಾಗ ಸಂಪೂರ್ಣ ಕಪ್ಪಾಗಿ ಕಾಣಿಸುತ್ತಿದ್ದು, ಪ್ರತಿಮೆಯ ಮುಖವೇ ಗೋಚರಿಸದಾಗಿದೆ. ಇದರಿಂದ ಪ್ರತಿಮೆ ಕುರೂಪವಾಗಿ ಕಾಣಲಿದ್ದು, ಶೀಘ್ರದಲ್ಲಿ ಜೇನುಗೂಡನ್ನು ಸಂಬಂಧಪಟ್ಟವರು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Wadeyar-Statue-face-Beehive-clearance-public-Insist

ಕೆ.ಆರ್.ವೃತ್ತದಲ್ಲಿ ವಾಹನಗಳ ಓಡಾಟವೂ ಹೆಚ್ಚಿರುವುದರಿಂದ ಪಾದಚಾರಿಗಳು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಕೋವಿಡ್ -19 ಬಳಿಕ ಕಳೆದೆರಡು ತಿಂಗಳಿನಿಂದ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ.

key words : Wadeyar-Statue-face-Beehive-clearance-public-Insist