ಹನುಮಾನ್ ಚಾಲೀಸಾ ಪಠಣಕ್ಕೆ ಬ್ರೇಕ್ ಹಾಕಿದ ಚುನಾವಣಾಧಿಕಾರಿಗಳು.

ಬೆಂಗಳೂರು,ಮೇ,9,2023(www.justkannada.in): ಬೆಂಗಳೂರಿನಲ್ಲಿ ಭಜರಂಗದಳದ ಕಾರ್ಯಕರ್ತರು ನಡೆಸುತ್ತಿದ್ದ ಹನುಮಾನ್ ಚಾಲೀಸಾ ಪಠಣಕ್ಕೆ ಚುನಾವಣಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

ಬೆಂಗಳೂರಿನ ವಿಜಯನಗರದ ಹರಿಹರೇಶ್ವರ ದೇಗಲುದ ಮುಂಭಾಗದಲ್ಲಿ ಸುಮಾರು 70 ಮಂದಿ ಭಜರಂಗದಳದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದರು. ಈ ಮಧ್ಯೆ 144 ಸೆಕ್ಷನ್ ಜಾರಿಯಲ್ಲಿರುವ ಹಿನ್ನೆಲೆ ಚುನಾವಣಾಧಿಕಾರಿಗಳಿ ಧಾವಿಸಿ ಹನುಮಾನ್ ಚಾಲೀಸಾ ಪಠಣ ನಿರ್ಬಂಧಿಸಿದ್ದಾರೆ.

ಇದೇ ವೇಳೆ ಬಜರಂಗದಳದ ಕಾರ್ಯಕರ್ತರು ಮತ್ತು ಚುನಾವಣಾಧಿಕಾರಿಗಳ ನಡುವೆ ವಾಗ್ವಾದ  ನಡೆದಿದ್ದು, ಚರ್ಚ್ ಮಸೀದಿಗಳಲ್ಲಿ ಅವಕಾಶ ಕೊಡ್ತೀರಾ. ಹನುಮಾನ್ ಚಾಲೀಸಾ ಪಠಣಕ್ಕೆ ಯಾಕೆ ಅವಕಾಶ ನೀಡ್ತಿಲ್ಲ ಎಂದು ಭಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Key words: Election officers  -chanting -Hanuman Chalisa.