ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದಲೇ ಭೂಮಿ ಹಸ್ತಾಂತರ ಎಂಬ ಹೇಳಿಕೆ ಸತ್ಯಕ್ಕೆ ದೂರ-ವರುಣಾ ಮಹೇಶ್.

ಮೈಸೂರು,ಸೆಪ್ಟಂಬರ್,16,2021(www.justkannada.in): ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಸರ್ಕಾರವೇ ರಾಮಕೃಷ್ಣ ಆಶ್ರಮಕ್ಕೆ ಭೂಮಿ ಹಸ್ತಾಂತರಿಸಿದೆ ಹೊರತು ಸ್ವಹಿತಾಸಕ್ತಿಯಿಂದ ಪಡೆದುಕೊಂಡಿಲ್ಲ ಎಂಬ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿನಂದಾಜಿ ರವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೋಶಾಧ್ಯಕ್ಷರು ಹಾಗೂ ಹೋರಾಟಗಾರ ವರುಣಾ ಮಹೇಶ್ ಹೇಳಿದ್ದಾರೆ.

ರಾಮಕೃಷ್ಣ ಆಶ್ರಮದ ಆಕ್ಷೇಪ ಕುರಿತು ಸ್ಪಷ್ಟೀಕರಣ ನೀಡಿರುವ ವರುಣಾ ಮಹೇಶ್ ಹೇಳಿರುವುದಿಷ್ಟು….

ತಮಗೆ ಬೇಕಾದಂತೆ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಪರಂಪರೆಯಿಂದ ಬಂದ ದಾಖಲೆಗಳನ್ನು ಮರೆಮಾಚಿ ನಿರಂಜನ ಮಠ ನಮ್ಮದೇ ಎಂದು ಹೇಳುತ್ತಿರುವುದು ಕಾನೂನು ಬಾಹಿರ.  ಸತ್ಯಾಸತ್ಯತೆಯನ್ನು ಮರೆಮಾಚುವ ಕುಹುಕ ಹೇಳಿಕೆಯಾಗಿದೆ. ಅವರ ಈ ಹೇಳಿಕೆ ಸ್ವಾಮಿ ವಿವೇಕಾನಂದರ ಪರಮಹಂಸರ ತತ್ವ ಸಿದ್ಧಾಂತಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಪೂರ್ವಾಪರ ತಿಳಿದುಕೊಳ್ಳದೆ ತಪ್ಪು ದಾಖಲಾತಿಗಳನ್ನು ಸರ್ಕಾರಕ್ಕೆ ನೀಡಿ ಸರ್ಕಾರವನ್ನು ವಂಚಿಸಿರುವುದು ತು೦ಬು ವಿಷಾದನೀಯವಾಗಿದೆ.

ಶಿವಲಿಂಗ, ನಂದಿ, ದಕ್ಷಿಣಮೂರ್ತಿ ಇವರು ಸನಾತನ ಹಿಂದೂಗಳಿಗೆ ಸೇರಿದ ದೈವಿ ಪ್ರತೀಕಗಳು ಎಂಬುದು ಸತ್ಯ. ಆದರೆ ಈ ನಿರಂಜನ ಮಠದಲ್ಲಿ ವೀರಶೈವ ಲಿಂಗಾಯಿತರೂ ಕೂಡ ಹಿಂದೂ ಧರ್ಮಕ್ಕೆ ಸೇರಿದವರೆ. ಅವರು ಪೂಜಿಸುತ್ತಿದ್ದ ಮೂರ್ತಿಗಳು ಇವುಗಳು. ಶೈವ ದೇವಾಲಯಗಳಲ್ಲಿ ನಂದಿ ಮತ್ತು ದಕ್ಷಿಣಮೂರ್ತಿ ಮುಂತಾದ ದೈವೀ ಪ್ರತಿಕೆಗಳನ್ನು ಪ್ರತಿಷ್ಠಾಪಿಸುತ್ತಿರುವುದು ಸರ್ವ ವಿಧಿತ. ಆದರೆ ಇವರು ವೀರಶೈವ ಲಿಂಗಾಯಿತರು ಇದನ್ನು ಇಟ್ಟು ಆರಾಧಿಸುತ್ತಾರೆ.

ರಾಮಕೃಷ್ಣ ಆಶ್ರಮದ ಅನುಯಾಯಿಗಳು ಜಾತ್ಯಾತ್ಯಾರು. ಇವರು ಸಂಪ್ರದಾಯವಾದಿಗಳಲ್ಲ. ನಿರಂಜನ ಎಂಬ ಶಬ್ದದ ಬಳಕೆ ಕೂಡ ಈ ಪರಂಪರೆಯಲ್ಲಿ ಇವರಿಗೆ ಬರುವುದಿಲ್ಲ ಹಾಗೂ ದರಿದ್ರ ದೇವೋಭವ ಎಂದು ಹೇಳುವ ವಿವೇಕಾನಂದರಿಗೆ ನಿರಂಜನ ಮಠ ಎಂಬ ಸಂಬಂಧವನ್ನು ಕಲ್ಪಿಸುವುದಾದರೂ ಹೇಗೆ? ಹಾಗೂ ಇವರು ಬ್ರಾಹ್ಮಣ ಮಠಗಳಲ್ಲಿ ನಂದಿ ಇರುವ ಹೆಬ್ಬಾಗಿಲು ಎಲ್ಲಾದರೂ ಇದೆಯಾ ಮತ್ತು ಶಿವಲಿಂಗ ಇರುವ ಕರ್ತೃ ಗದ್ದುಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಈ ದೃಷ್ಟಿಯಿಂದ ನಿರಂಜನ ಮಠವು ಪರಂಪರೆಯಿಂದ ವೀರಶೈವ ಲಿಂಗಾಯಿತ ಮಠ ಹಿಂದೆ ಇದ್ದ ಗುರುಗಳಿಗೆ ಆರಾಧಿಸುತ್ತಿದ್ದ ಶಿವನ ಗದ್ದುಗೆ ಕೂಡ ಇದೆ. ಮತ್ತು ಈ ಹಿಂದೆ ಇದ್ದ ಗುರುಗಳನ್ನು ಚಿತ್ರಹಿಂಸೆ ನೀಡಿ ಅವರನ್ನು ಹೊರಹಾಕಿ ಇವರು ತಮ್ಮ ಆಶ್ರಮದ ಹೆಸರಿನಲ್ಲಿ ಜಾಗವನ್ನು ವಶೀಕರಿಸಿಕೊಂಡಿದ್ದಾರೆ.

ಸ್ವಾಮಿ ವಿವೇಕಾನಂದರು ಹೆಚ್ಚಾಗಿ ಉಪನ್ಯಾಸ ನೀಡುತ್ತಿದ್ದು, ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಶಾಲೆಯ ಆವರಣದಲ್ಲಿ ಹಾಗೂ ಇವರು ಉಳಿದುಕೊಳ್ಳುತ್ತಿದ್ದುದು ಈಗ ಇರುವ ವಾಣಿಜ್ಯ ಕಛೇರಿಯ ಕಟ್ಟಡದಲ್ಲಿ. ಈಗಿರುವಾಗ ನಿರಂಜನ ಮಠವನ್ನು ದೃಷ್ಟಿಯಿಟ್ಟುಕೊಂಡು ಅವರು ಅಲ್ಲಿ ವಾಸವಿದ್ದರು ಎಂದು ಸುಳ್ಳು ಹೇಳುತ್ತಿರುವುದು ಎಷ್ಟು ಸರಿ ಮತ್ತು ಸ್ಮಾರಕವನ್ನು ಅಲ್ಲೇ ನಿರ್ಮಿಸಬೇಕೆಂದು ವಾದಿಸುತ್ತಿರುವುದು ಸಮಾಜದಲ್ಲಿ ಕೋಮು ಭೀತಿಯನ್ನು ಬಿತ್ತುವ ಹುನ್ನಾರವಾಗಿದೆ ಹಾಗೂ ದಕ್ಷಿಣಮೂರ್ತಿ ವಿಗ್ರಹವನ್ನು ಕಿತ್ತುಹಾಕಿರುವುದು ಮತ್ತು ಈ ದಿನ 16.09.2021 ರಂದು ಸಂಜೆ 5.00 ಗಂಟೆಗೆ ಸ್ವಯಂ ಸೇವಕರ ಸಭೆಯನ್ನು ತಮ್ಮ ಆಶ್ರಮದಲ್ಲಿ ಕರೆದು ಕೋಮು ಸಾಮರಸ್ಯ ಭಿತ್ತುವ ಸಭೆ ನಡೆಸುತ್ತಿರುವುದು ಎಷ್ಟು ಸರಿ ? ಮತ್ತು ಇವರ ಪ್ರಾಮಾಣಿಕತೆ ಸತ್ಯಾಸತ್ಯತೆ, ಬದ್ಧತೆ ಎಷ್ಟು ಕಪಟವಾಗಿದೆ ಎಂದು ಈ ಉದಾಹರಣೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಮೊದಲು ಇವರು 36 ಸಾವಿರ ಅಡಿಗಳು ವಿವೇಕಾನಂದ ಸ್ಮಾರಕಕ್ಕೆ ಬೇಕೆಂದು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಸರ್ಕಾರಕ್ಕೆ ಮೋಸವೆಸಗಿದ್ದಾರೆ. ಇಷ್ಟಲ್ಲದೆ ಅಕ್ಕಪಕ್ಕದ ಜಾಗವನ್ನು ಸಹ ಸೇರಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಈಗ 46 ಸಾವಿರ ಅಡಿಗಳಷ್ಟು ಖಾತೆ ಮಾಡಿಸಿಕೊಂಡು ಅಕ್ರಮವೆಸಗಿರುವುದು ಎದ್ದು ಕಾಣುತ್ತದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಆಶ್ರಮದವರು ಮತ್ತು ಶ್ರೀ ಮುಕ್ತಾನಂದಾಜೀ ರವರಲ್ಲಿ ಎಷ್ಟರಮಟ್ಟಿಗೆ ಇವರಲ್ಲಿ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ ಇದೆ ಎಂದು ನಂಬಬೇಕು?

ನಿರ೦ಜನ ಮತದ ಪೂರ್ವಾ ಪರ ಇತಿಹಾಸದ ಬಗ್ಗೆ ಮತ್ತು ಇವರು ಮಾಡಿಕೊಂಡಿರುವ ಅಕ್ರಮ ಖಾತೆ ಬಗ್ಗೆ ಜಿಲ್ಲಾಧಿಕಾರಿಗಳು ಅವರ ಸಮಕ್ಷಮದಲ್ಲಿ ತನಿಖೆ ಆಗಬೇಕು ಮತ್ತು ಸತ್ಯಾಸತ್ಯತೆ ಹೊರಬರಬೇಕು ಹಾಗೂ ಸಾರ್ವಜನಿಕರಿಗೂ ತಿಳಿಯಬೇಕೆಂದು  ವರುಣಾ ಮಹೇಶ್ ಆಗ್ರಹಿಸಿದ್ದಾರೆ.

Key words: Varun Mahesh – land – government – construction – Swami Vivekananda’s- memorial-ramakrishna ashrama