ಸಬರಮತಿ ಆಶ್ರಮಕ್ಕೆ ಟ್ರಂಪ್‌ : ಟಿಪ್ಪಣಿಯಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಯಾವುದೇ ಉಲ್ಲೇಖವೇ ಇಲ್ಲ..!

 

ಹೊಸದಿಲ್ಲಿ, ಫೆ. 24, 2020 : (www.justkannada.in news ) ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಸೋಮವಾರ ಭೇಟಿ ನೀಡಿದ್ದರು. ಈ ವೇಳೆ ಸಂದರ್ಶಕರ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ “ಉತ್ತಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ‘ ಎಂದು ಬರೆದಿದ್ದಾರೆ. ಆದರೆ ಮಹಾತ್ಮನ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಟೀಕೆಗೆ ಗುರಿಯಾಗಿದೆ.

ಅಮೆರಿಕದ ಅಧ್ಯಕ್ಷರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಸಬರಮತಿ ಆಶ್ರಮಕ್ಕೆ ತೆರಳಿದರು. ಆಶ್ರಮ ವೀಕ್ಷಿಸಿದ ಬಳಿಕ ಸಂದರ್ಶಕರ ಪುಸ್ತಕವಿರಿಸಿದ್ದ ಕಡೆ ತೆರಳಿದ ಟ್ರಂಪ್, “ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿಗೆ … ಈ ಅದ್ಭುತ ಭೇಟಿಗಾಗಿ ಧನ್ಯವಾದಗಳು!” ಎಂದು ಬರೆದರು.

US President Donald Trump -  "great friend" Prime Minister Narendra Modi- visitors' book - Sabarmati Ashram-  Ahmedabad.

ವಿಶೇಷವೆಂದರೆ, ಟ್ರಂಪ್‌ರ ಟಿಪ್ಪಣಿಯಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಆಶ್ರಮವು ಸಬರಮತಿ ನದಿಯ ದಡದಲ್ಲಿದೆ, ಆಶ್ರಮವು ಮಹಾತ್ಮ ಗಾಂಧಿಯವರ ಅನೇಕ ನಿವಾಸಗಳಲ್ಲಿ ಒಂದಾಗಿದೆ, ಅವರು ಭಾರತದಾದ್ಯಂತ ಪ್ರಯಾಣಿಸದಿದ್ದಾಗ ಮತ್ತು ಸಬರಮತಿ ಮತ್ತು ಸೇವಾಗ್ರಾಮ್ (ವಾರ್ಧಾ, ಮಹಾರಾಷ್ಟ್ರ) ದಲ್ಲಿ ವಾಸಿಸುತ್ತಿದ್ದರು.

US President Donald Trump -  "great friend" Prime Minister Narendra Modi- visitors' book - Sabarmati Ashram-  Ahmedabad.

ಆಶ್ರಮದಲ್ಲಿ, ಟ್ರಂಪ್, ಚರಕವನ್ನು ತಿರುಗಿಸಲು ಪ್ರಯತ್ನಿಸಿದರು. ಯು.ಎಸ್. ಅಧ್ಯಕ್ಷರಿಗೆ ಗಾಂಧೀಜಿಯ ಬಗ್ಗೆ ಮತ್ತು ಸ್ವಾವಲಂಬನೆಯ ಸಂಕೇತವಾಗಿ ಚರಕದದ ಮಹತ್ವದ ಬಗ್ಗೆ ತಿಳಿಸಲಾಯಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಸ್ಥಳದ ಮಹತ್ವವನ್ನು ವಿವರಿಸಲಾಯಿತು. ನಂತರ, ಪ್ರಧಾನ ಮಂತ್ರಿ “ತ್ರೀ ವೈಸ್ ಮಂಕೀಸ್” ಅನ್ನು ಯುಎಸ್ ಅಧ್ಯಕ್ಷರಿಗೆ ಸ್ಮರಣಾರ್ಥವಾಗಿ ನೀಡಿದರು.

key words : US President Donald Trump – “great friend” Prime Minister Narendra Modi- visitors’ book – Sabarmati Ashram- Ahmedabad.