ಭೂಗತ ಪಾತಕಿ ರವಿ ಪೂಜಾರಿಯನ್ನ ಸಿಸಿಬಿ ಪೊಲೀಸರ ವಶಕ್ಕೆ ನೀಡಿದ ಕೋರ್ಟ್…

ಬೆಂಗಳೂರು,ಫೆ,24,2020(www.justkannada.in):  ನಟೋರಿಯಸ್ ಗ್ಯಾಂಗ್‌ಸ್ಟರ್ , ಭೂಗತ ಪಾತಕಿ ರವಿ ಪೂಜಾರಿಯನ್ನ ಮಾರ್ಚ್ 17ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಬೆಂಗಳೂರಿನ ತಿಲಕ್ ನಗರದ ಡಬಲ್ ಮರ್ಡರ್ ಪ್ರಕರಣ ಸಂಬಂಧ ರವಿ ಪೂಜಾರಿಯನ್ನ 14 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ 1ನೇ ACMM ಕೋರ್ಟ್​ನ ನ್ಯಾಯಾಧೀಶರು ಆದೇಶಿಸಿದ್ದಾರೆ. ವಿಚಾರಣೆ ವೇಳೆ ವಿಡಿಯೋ ರೆಕಾರ್ಡಿಂಗ್ ಮಾಡುವಂತೆ ಸಿಸಿಬಿ ತನಿಖಾಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ. ಇದೇ ವೇಳೆ ತನಗೆ ಹೃದಯ ಸಮಸ್ಯೆ ಮತ್ತು ಸಕ್ಕರೆ ಕಾಯಿಲೆ ಇದೆ ಎಂದು ನ್ಯಾಯಾಧೀಶರ ಮುಂದೆ ರವಿ ಪೂಜಾರಿ ತಿಳಿಸಿದ್ದಾರೆ.

2007 ಫೆಬ್ರವರಿ 15 ರಂದು ಶಬನಮ್ ಡೆವಲಪರ್ಸ್ ಮಾಲೀಕರಾದ ಶೈಲಜಾ ಮತ್ತು ರವಿ ಎಂಬುವವರನ್ನ ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ರವಿಪೂಜಾರಿ ಎ1 ಆಗಿದ್ದು ಈ ಹಿನ್ನೆಲೆ ಕೋರ್ಟ್ ರವಿ ಪೂಜಾರಿಯನ್ನ ಸಿಸಿಬಿ ಪೊಲೀಸರ ವಶಕ್ಕೆ ನೀಡಿದೆ.

Key words: gangstar- Ravi Pujari- CCB  custody -court