ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಗೊಂಬೆ ನಿವೇದಿತಾ ಗೌಡ- ರ್ಯಾಪರ್ ಚಂದನ್ ಶೆಟ್ಟಿ…

ಮೈಸೂರು,ಫೆ,24,2020(www.justkannada.in):  ಹಸೆಮಣೆ ಏರಲು ಬಿಗ್ ಬಾಸ್ ಗೊಂಬೆ ನಿವೇದಿತಾಗೌಡ – ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಸಜ್ಜಾಗಿದ್ದಾರೆ.

ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಫೆ 25, 26 ರಂದು  ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಸಾಂಪ್ರದಾಯಿಕವಾಗಿ ನೆರವೇರಲಿದ್ದು,  ಇದಕ್ಕಾಗಿ ಸಿದ್ಧತಾ ಕಾರ್ಯ ಜೋರಾಗಿದೆ. ಮೈಸೂರಿನ ದಟ್ಟಗಹಳ್ಳಿಯ ನಿವೇದಿತಾ ಗೌಡ ಮನೆಯಲ್ಲಿ ಮದುವೆ ಕಾರ್ಯ ಜೋರಾಗಿ ನಡೆಯುತ್ತಿದೆ.

ಇನ್ನು ಗಣ್ಯರಿಗೆ  ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದು, ನಿವೇದಿತಾ ಗೌಡ-ಚಂದನ್ ಶೆಟ್ಟಿ ಮದುವೆ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ಕಲಾವಿದರು, ಗಾಯಕರು ಗಣ್ಯರು ಸೇರಿ ಸುಮಾರು ಐದು ಸಾವಿರ ಜನ ಸೇರುವ ನಿರೀಕ್ಷೆ ಇದೆ.

ಚಂದನ್ ಶೆಟ್ಟಿ- ನಿವೇದಿತಾ ಗೌಡ ಜೋಡಿ ಕಳೆದ ದಸರಾ ಮಹೋತ್ಸವದ ಅಂಗವಾಗಿ ನಡೆದ ಯುವ ದಸರಾದ ಸರ್ಕಾರಿ ವೇದಿಕೆಯಲ್ಲಿ ಪರಸ್ಪರ ಪ್ರೀತಿ ಹಂಚಿಕೊಂಡು ವಿವಾದಕ್ಕೀಡಾಗಿದ್ದರು. ಇದೀಗ ನಾಳೆ ಮತ್ತು ಫೆಬ್ರವರಿ 26 ರಂದು ಹಸೆಮಣೆ ಏರಿ ದಾಂಪತ್ಯಕ್ಕೆ  ಜೀವನಕ್ಕೆ  ಕಾಲಿಡಲು ನಿವೇದಿತಾ ಚಂದನ್ ಶೆಟ್ಟಿ ಸಜ್ಜಾಗಿದ್ದಾರೆ.

Key words: Big Boss- Nivedita Gowda-rapper -Chandan Shetty – Marriage-mysore