ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ: ಕೇಂದ್ರ ಸಚಿವ ನಾರಾಯಣಸ್ವಾಮಿ  ಯಡವಟ್ಟು.

ಗದಗ,ಆಗಸ್ಟ್,20,2021(www.justkannada.in): ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಬದಲು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಕೇಂದ್ರ ಸಚಿವ ನಾರಾಯಸ್ವಾಮಿ ಯಡವಟ್ಟು ಮಾಡಿಕೊಂಡಿದ್ದಾರೆ.

ಗದಗದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಜನಾಶೀರ್ವಾದ ಕಾರ್ಯಕ್ರಮದ ಉತ್ಸಾಹದಲ್ಲಿ ಮಾಹಿತಿ ಕೊರತೆಯಿಂದಾಗಿ ಸೇವೆಯಲ್ಲಿರುವ ಸೈನಿಕನ ಮನೆಗೆ ತೆರಳಿ ಕುಟುಂಬಕ್ಕೆ‌ ‘ಸಾಂತ್ವನ’ ಹೇಳಿ ಬಂದಿದ್ದಾರೆ.

ಗದಗ ತಾಲ್ಲೂಕಿನ ಮುಳಗುಂದ ಪಟ್ಟಣದ ಹುತಾತ್ಮ ಯೋಧ ಬಸವರಾಜ ಹಿರೇಮಠ ಅವರ ಮನೆಗೆ ಕೇಂದ್ರಸಚಿವ ನಾರಾಯಣಗೌಡ  ಭೇಟಿ ನೀಡಿ ಸಾಂತ್ವನ ಹೇಳಬೇಕಿತ್ತು. ಆದರೆ ಪ್ರಸ್ತುತ ಜಮ್ಮು‌ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿಕುಮಾರ ಕಟ್ಟಿಮನಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಯೋಧ ರವಿಕುಮಾರ ಪತ್ನಿ ಅವರೊಂದಿಗೆ ಮಾತನಾಡುತ್ತಾ, ಯೋಗಕ್ಷೇಮ ವಿಚಾರಿಸಿದ್ದಾರೆ. ಆ ವೇಳೆ, ಸರ್ಕಾರಿ ನೌಕರಿ ಹಾಗೂ ಜಮೀನು ಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದ ಕೇಂದ್ರ ಸಚಿವರಿಂದ ಎಡವಟ್ಟಾಗಿದೆ ಎಂದು ತಿಳಿದುಬಂದಿದೆ.

Key words: Union Minister –Narayanaswamy-gadag- visit- soldier-house