ಲೋಕಸಭೆಯಲ್ಲಿ ಜಮ್ಮುಕಾಶ್ಮೀರ ಪುನರಚನೆ ವಿಧೇಯಕ ಮಂಡಿನೆ: ಪಿಓಕೆಗಾಗಿ ಪ್ರಾಣಕೊಡಲು ಸಿದ್ಧ ಎಂದ್ರು ಕೇಂದ್ರ ಗೃಹ ಸಚಿವ ಅಮಿತ್ ಶಾ…..

ನವದೆಹಲಿ,ಆ,6,2019(www.justkannada.in): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ 370 ಕಲಂ ರದ್ದು ಮಾಡಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕಾಂಗ್ರೆಸ್ ಗೆ ಲೋಕಸಭೆಯಲ್ಲಿ ಚಾಟಿ ಬೀಸಿರುವ ಕೇಂದ್ರಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಸಹ ಸೇರುತ್ತದೆ. ಪಿಒಕೆಗಾಗಿ ನಾವು ಪ್ರಾಣಬೇಕಾದರೂ ಕೊಡುತ್ತೇವೆ ಎಂದು ಹೇಳಿದ್ದಾರೆ.

ಜಮ್ಮುಕಾಶ್ಮೀರ ಪುನರಚನೆ ವಿಧೇಯಕವನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ಮಂಡಿಸಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದೆ.  ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ಧುಗೊಳಿಸುವ ವಿಧೇಯಕವನ್ನ ನಿನ್ನೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು  ಈ ನಡುವೆ ಇದೀಗ ಕೇಂದ್ರಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರ ಪುನರಚನೆ ವಿಧೇಯಕ ಮಂಡಿಸಿದ್ದಾರೆ.

ಪರಚ್ಛೇದ 370 ರದ್ಧುಗೊಳಿಸುವ  ಪ್ರಸ್ತಾಪ ಮತ್ತು ಜಮ್ಮುಕಾಶ್ಮೀರಕ್ಕೆ ಮೀಸಲು ವಿಧೇಯಕ ಮಂಡನೆಗೆ  ಕಾಂಗ್ರೆಸ್  ತೀವ್ರ ವಿರೋಧ ವ್ಯಕ್ತಪಡಿಸಿದೆ.  ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ ವಿರೋಧ ವ್ಯಕ್ತಪಡಿಸಿದ್ದು,  1948ರಲ್ಲಿ ಕಾಶ್ಮೀರ ವಿಚಾರ ವಿಶ್ವಸಂಸ್ಥೆಗೆ ವಹಿಸಲಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ನಮಗೆ ಸ್ಪಷ್ಟನೆ ನೀಡಲಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾವು ಯಾವ ನಿಯಮ ಮೀರಿದ್ದೀವಿ ಹೇಳಲಿ ಅಮಿತ್ ಶಾ ಪ್ರಶ್ನೆ.  ವಿಶ್ವಸಂಸ್ಥೇ ಮೇಲುಸ್ತುವಾರಿ ಬೇಕಾ ಹೀಗೆಂದು ಕಾಂಗ್ರೆಸ್ ಬಯಸುತ್ತಿದೆಯಾ ಸ್ಪಷ್ಟಪಡಿಸಲಿ ಎಂದು ಮತ್ತೆ ಪ್ರಶ್ನೆ ಹಾಕಿದರು.

ಹಾಗೆಯೇ . ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಜಮ್ಮುಕಾಶ್ಮೀರದ ಒಳಗೆಯೇ ಪಾಕ್ ಆಕ್ರಮಿತ ಕಾಶ್ಮೀರ ಬರುತ್ತದೆ. ಜಮ್ಮು ಕಾಶ್ಮೀರ ಎಂದು ಬಳಸುವಾಗ ಪಿಓಕೆ ಸಹ ಸೇರುತ್ತೆ. ಪಿಓಕೆ ಭಾರತದ ಭಾಗ ಅಂತಾ ಒಪ್ಪಿಕೊಳ್ಳಲು ನಿಮಗೆ ಇಷ್ಟವಿಲ್ವಾ  ಎಂದು ಪ್ರಶ್ನಿಸಿದರು.

ಜಮ್ಮು ಕಾಶ್ಮೀರ ಪುನರಚನೆ ವಿಧೇಯಕ ಕೇವಲ ರಾಜಕೀಯ ವಿಚಾರ ಅಲ್ಲ. ಕಾನೂನಿನ ವಿಚಾರವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಭಾರತ ಸಂವಿಧಾನದಲ್ಲಿ ಉಲ್ಲೇಖವಿದೆ. ಜಮ್ಮುಕಾಶ್ಮೀರಕ್ಕಾಗಿ ಪ್ರಾಣತ್ಯಾಗಕ್ಕೂ ನಾವು ಸಿದ್ಧರಿದ್ದೇವೆ. ಈ ಪ್ರಸ್ತಾಪ, ವಿಧೇಯಕ ಮಂಡನೆ ದಿನ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಸಂವಿಧಾನ ಪ್ರಕಾರವೇ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅಮಿತ್ ಶಾ ತಿಳಿಸಿದರು.

ಲೋಕಸಭೆಯಲ್ಲಿ ಈ ಬಗ್ಗೆ ಆಡಳಿತ ಪಕ್ಷ ಮತ್ತು  ವಿಪಕ್ಷಗಳ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ.

Key words: Union Home Minister -Amit Shah- presented – Jammu and Kashmir- Reconstruction -Lok Sabha