ಏಳು ವರ್ಷದ ಮಗುವನ್ನ ಕೊಂದು ತಾನೂ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ…

ಬೆಂಗಳೂರು,ಆ,6,2019(www.justkannada.in): ಏಳು ವರ್ಷ ಮಗುವನ್ನು ಕೊಂದು ತಾಯಿ ತಾನೂ ಕೂಡ ಕಟ್ಟಡದಿಂದ ಹಾರಿ  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜ್ಯೋತಿ ಎಂಬಾಕೆಯೇ  ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.  ಏಳು ವರ್ಷದ ಶಾಬುನಾ ಎಂಬ ಹೆಣ್ಣು ಮಗುವನ್ನು ಕೊಂದು ತಾಯಿ ಜೋತಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.

ಜ್ಯೋತಿ ಪಂಕಜ್ ಎಂಬಾತನ್ನು ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಜ್ಯೋತಿ ಮಾಡೆಲಿಂಗ್ ಡ್ಯಾನ್ಸ್  ಮಾಡುತ್ತಿದ್ದು ಪತಿ ಪಂಕಜ್ ಆಶೋಕ ಪಿಲ್ಲರ್ ಬಳಿ ಹಾರ್ಡ್ವೇರ್ ಶಾಪ್ ಇಟ್ಟಿದ್ದರು.  ಈ ನಡುವೆ ನಿನ್ನೆ ಈ ದಂಪತಿ ಜಗಳ ವಾಡಿಕೊಂಡಿದ್ದರು. ಜಗಳ ಬಳಿಕ ಪಂಕಜ್  ಮನೆಯಿಂದ ತೆರಳಿದ್ದ. ಈ ವೇಳೆ ಜ್ಯೋತಿ ಮಗುವನ್ನ ಕೊಂದು ಆತ್ಮಹತ್ಯೆ ಶರಣಾಗಿದ್ದಾಳೆ ಎನ್ನಲಾಗಿದ್ದು  ಘಟನೆ ಬಳಿಕ ಆರ್ ಬಿ ಐ ಲೇಔಟ್ ನ ಸುಪ್ರಾ ಅಸ್ಪತ್ರೆಗೆ ಪೊಲೀಸರು ದಾಖಲಿಸಿದ್ದರು.

Key words:  woman- committed -suicide – killing- child-bangalore