Saturday, August 15, 2026

BDA Apartments

Home Cinema ಪತ್ನಿ, ಮಗನ ಜತೆ ‘ಕುರುಕ್ಷೇತ್ರ’ ನೋಡಿದ ಚಾಲೆಂಜಿಂಗ್ ಸ್ಟಾರ್ !

ಪತ್ನಿ, ಮಗನ ಜತೆ ‘ಕುರುಕ್ಷೇತ್ರ’ ನೋಡಿದ ಚಾಲೆಂಜಿಂಗ್ ಸ್ಟಾರ್ !

ಬೆಂಗಳೂರು, ಆಗಸ್ಟ್ 06, 2019 (www.justkannada.in): ಇದೇ ಶುಕ್ರವಾರ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆ ಆಗುತ್ತಿದೆ.

ರಿಲೀಸ್ ಗೆ ಮುಂಚೆ ಸಿನಿಮಾವನ್ನು ದರ್ಶನ್ ನೋಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಗೆ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

ಬೆಂಗಳೂರಿನ Carnivaal Cenimas ನಲ್ಲಿ ನಿನ್ನೆ ರಾತ್ರಿ ‘ಕುರುಕ್ಷೇತ್ರ’ ಚಿತ್ರದ ವಿಶೇಷ ಪ್ರದರ್ಶನವನ್ನು ದರ್ಶನ್ ಕುಟುಂಬಕ್ಕಾಗಿ ಏರ್ಪಡಿಸಲಾಗಿತ್ತು.

ದುರ್ಯೋಧನ ಪಾತ್ರವನ್ನು ನೋಡಿ ಎಲ್ಲರೂ ಖುಷಿಯಾಗಿದ್ದಾರಂತೆ. ಅಲ್ಲದೆ, ದರ್ಶನ್ ಪುತ್ರ ವಿನೀಶ್ ದುರ್ಯೋಧನ ಪೋಸ್ಟರ್ ಮುಂದೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ.