ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ:  ಅನ್ ಲಾಕ್ 3.0  ಬಗ್ಗೆ ಚರ್ಚೆ ಸಾಧ್ಯತೆ…

ನವದೆಹಲಿ,ಜು,29,2020(www.justkannada.in):  ಕೊರೋನಾ ಹರಡುವಿಕೆ ತಡೆಗಟ್ಟಲು ಲಾಕ್ ಡೌನ್ ಘೋಷಿಸಿ ನಂತರ ಅನ್ ಲಾಕ್ ಮಾಡಲಾಗಿತ್ತು. ಇದೀಗ ಎರಡನೇ ಹಂತದ ಅನ್ಲಾಕ್‌ ಮುಕ್ತಾಯವಾಗಲು ಮೂರು ದಿನ ಮಾತ್ರ ಬಾಕಿ ಇದ್ದು, ಈ ನಡುವೆ ಇಂದು ಕೇಂದ್ರ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.  ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಕುತೂಹಲ ಮನೆಮಾಡಿದೆ.jk-logo-justkannada-logo

ಇಂದು ಬೆಳಿಗ್ಗೆ 10.30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು ಸಭೆಯಲ್ಲಿ ಮೂರನೇ ಹಂತದ ಲಾಕ್ ಡೌನ್  ಜಾರಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.union-cabinet-meeting-today-prime-minister-modi

ಅನ್ಲಾಕ್ 3ರ ವೇಳೆ ಶಾಲಾ-ಕಾಲೇಜುಗಳು, ಸಿನಿಮಾ ಥಿಯೇಟರುಗಳ ಆರಂಭಕ್ಕೆ ಅವಕಾಶ ನೀಡುತ್ತಾರೆಯೇ ಇಲ್ಲವೋ ಅದೇ ರೀತಿ ಹಂತಹಂತವಾಗಿ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಹೆಚ್ಚಿಸುತ್ತಾರೆಯೇ. ರೈಲು ಸಂಚಾರ ಈ ಬಗ್ಗೆ ಚರ್ಚಿಸಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಅನ್ ಲಾಕ್ 2.0 ಜುಲೈ 31ಕ್ಕೆ ಮುಗಿಯಲಿದೆ.

Key words: Union Cabinet –meeting- today, – Prime Minister Modi.