ಗಗನಕ್ಕೇರುತ್ತಿದೆ ‘ಕಿಂಗ್’ ಕೊಯ್ಲಿ ಬ್ರಾಂಡ್ ಮೌಲ್ಯ

ಬೆಂಗಳೂರು, ಫೆಬ್ರವರಿ 07, 2020 (www.justkannada.in): ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಇದು ಅವರ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತದೆ.

ಈ ಮೂಲಕ ಕೊಹ್ಲಿಯ ಬ್ರಾಂಡ್ ಮೌಲ್ಯವು ಗಗನಕ್ಕೇರುತ್ತಿದೆ. ಜಾಗತಿಕ ಸಲಹಾ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಕೊಹ್ಲಿಯ ಬ್ರಾಂಡ್ ಮೌಲ್ಯವು 2019 ರಲ್ಲಿ ಶೇ 39 ರಷ್ಟು ಹೆಚ್ಚಳವಾಗಿದ್ದು, 237.5 ಮಿಲಿಯನ್​ಗೆ ಏರಿದೆ. ಈ ಅಧ್ಯಯನವು ಭಾರತೀಯ ಪ್ರಸಿದ್ಧ ಸೆಲೆಬ್ರಿಟಿ ಬ್ರ್ಯಾಂಡ್‌ಗಳ ಸೆಲಬ್ರಿಟಿಯಾಗಿದ್ದಾರೆ.

ಆಯಾ ಕಂಪನಿಗಳ ಜೊತೆ ಒಪ್ಪಂದ ಪ್ರಕಾರ ಲೆಕ್ಕಹಾಕಿದ ಬ್ರಾಂಡ್ ಮೌಲ್ಯಗಳ ಆಧಾರದ ಮೇಲೆ ಈ ಸ್ಥಾನಗಳನ್ನು ಕೊಡಲಾಗಿದೆ. ಪ್ರಸಕ್ತ ಮೂರು ವರ್ಷದಲ್ಲಿ ಕೊಹ್ಲಿ ತಮ್ಮ ಉನ್ನತ ಸ್ಥಾನವನ್ನು ಕಾಯ್ದುಕೊಂಡು ಹೋಗುತ್ತಿದ್ದು, ಬಾಲಿವುಡ್​ ನಟ, ನಟಿಯರಾದ ಅಕ್ಷಯ್​ ಕುಮಾರ್, ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​ ಮತ್ತು ಶಾರುಖ್ ಖಾನ್ ಅವರಿಗಿಂತ ಉತ್ತಮ ಬ್ರಾಂಡ್​ ಮೌಲ್ಯವನ್ನು ಹೊಂದಿದ್ದಾರೆ.

2019 ವರ್ಷವು ಕೊಹ್ಲಿಗೆ ಉತ್ತಮವಾಗಿದ್ದು, 2,455 ರನ್​ಗಳನ್ನು ಗಳಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪ್ರಮಖ ರನ್​ ಮಷಿನ್​ ಆಗಿ ಹೊರಹೊಮ್ಮಿದ್ದಾರೆ.