ಪಾನಿಪುರಿ ಮಾಡುತ್ತಾ ರಜೆ ದಿನ ಕಳೆಯುತ್ತಿರುವ ಕೂಲ್ ಕ್ಯಾಪ್ಟನ್ !

ಬೆಂಗಳೂರು, ಫೆಬ್ರವರಿ 07, 2020 (www.justkannada.in): ಸದ್ಯ ಆಟದಿಂದ ರಜೆ ಪಡೆದುಕೊಂಡಿರುವ ಧೋನಿ, ಸೇನೆಯಲ್ಲಿ ಕೆಲ ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ತಮ್ಮ ಮಗಳು ಜೀವಾಳೊಂದಿಗೆ ಕಳೆಯುತ್ತಿರುವ ಸುಂದರ ಕ್ಷಣಗಳು ಹಾಗೂ ಮಡದಿಯೊಂದಿಗೆ ಕಳೆಯುವ ಕ್ಷಣಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಧೋನಿ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.

ಟೀಂ ಇಂಡಿಯಾ ಮಾಜಿ ವೇಗಿ ರುದ್ರ ಪ್ರತಾಪ್ ಸಿಂಗ್ ಹಾಗೂ ಪಿಯೂಶ್ ಚಾವ್ಲಾ ಜೊತೆಗೆ ಪಾನಿಪೂರಿ ಮಾಡಿಕೊಂಡು ಎಂಜಾಯ್ ಮಾಡುತ್ತಿರುವ ಧೋನಿಯವರ ಮತ್ತೊಂದು ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ.

ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿರುವ ಧೋನಿ, ಗೋಲ್‌ಗಪ್ಪಾಗಳನ್ನ ಮಾಡುತ್ತಾ ತಮ್ಮ ಲೀಸರ್‌ ಸಮಯವನ್ನು ಗೆಳೆಯರೊಂದಿಗೆ ಎಂಜಾಯ್‌ ಮಾಡುತ್ತಿದ್ದಾರೆ.